ಜೇವೂರ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಕಳ್ಳತನ, ಚಿನ್ನ-ಬೆಳ್ಳಿ ಆಭರಣಗಳ ಮೌಲ್ಯ ಎಷ್ಟು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಇಂಡಿ ತಾಲೂಕಿನ ಜೇವೂರ ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದ ಗರ್ಭಗುಡಿಯ ಬಾಗಿಲ ಕೀಲಿ ಮುರಿದು ಲಿಂಗದ ಮೇಲೆ ಹಾಕಿದ ದೇವರ ಮೂರ್ತಿ ಹಾಗೂ ಅಲಂಕಾರಕ್ಕೆ ಬಳಸಿದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ.
ಜ. 6ರಂದು ರಾತ್ರಿ 11ರಿಂದ ಜ. 7ರಂದು ಬೆಳಗಿನ 5 ಗಂಟೆ ಅವಧಿಯಲ್ಲಿ ಕಳ್ಳತನ ನಡೆದಿದೆ. ಬೆಳ್ಳಿಯ ರೇವಣಸಿದ್ಧೇಶ್ವರ ಮೂರ್ತಿ, ಬೆಳ್ಳಿ ಗದೆ, ಬೆಳ್ಳಿ ತೊಟ್ಟಿಲು, ಬೆಳ್ಳಿಯ ಪಾದರಕ್ಷೆ, ತ್ರೀಶೂಲ, ತಂಬಿಗೆ, ಲಿಂಗಾಕಾರ, ಬೆತ್ತ, ದಿಂಡಿ ಗದಾ, ಮೂರ್ತಿಗೆ ಹಾಕಿದ ಬಂಗಾರದ ಗದಾ ಹೀಗೆ ಬೇರೆ ಬೇರೆ ಬೆಳ್ಳಿ ಚಿನ್ನಾಭರಣ ಕಳವು ಮಾಡಲಾಗಿದ್ದು, ಒಟ್ಟು 2,70,500 ರೂ.ಮೌಲ್ಯದ ಸಾಮಗ್ರಿ ಕಳುವಾಗಿದೆ.
ಈ ಬಗ್ಗೆ ಅರ್ಚಕ ಶಿವಯ್ಯ ದಾನಯ್ಯ ಮಠ ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)