ಭೀಮಾತೀರದಲ್ಲಿ ಅಕ್ರಮ ಮರಳು ದಂಧೆ, ಪಿಎಸ್‌ಐ ಯಡಹಳ್ಳಿ ದಾಳಿಗೆ ಕಂಗಾಲು, ಬೋಟ್-ಟಿಪ್ಪರ್ ಬಿಟ್ಟು ಪರಾರಿ….!
ಸರಕಾರ್ ನ್ಯೂಸ್ ವಿಜಯಪುರ
ಭೀಮಾತೀರದಲ್ಲಿ ಅಕ್ರಮ ಮರಳು ದಂಧೆ ಜೋರಾಗಿಯೇ ನಡೆಯುತ್ತಿದ್ದು, ಪೊಲೀಸರು ದಾಳಿ ನಡೆಸುತ್ತಿದ್ದಂತೆ ದಂಧೆ ಕೋರರು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಧೂಳಖೇಡ ಸಮೀಪದ ಭೀಮಾ ನದಿ ದಡದಲ್ಲಿ ಯಾಂತ್ರೀಕೃತ ಬೋಟ್ ಬಳಸಿ ಮರಳು ಎತ್ತುತ್ತಿದ್ದ ಮಾಹಿತಿ ತಿಳಿದು ಝಳಕಿ ಪಿಎಸೈ ಎಸ್.ಡಿ. ಯಡಹಳ್ಳಿ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡು ದಂಧೆ ಕೋರರು ಪರಾರಿಯಾಗಿದ್ದಾರೆ.
ಏನಿದು ಪ್ರಕರಣ?
ಜ. 6ರಂದು ನಸುಕಿನ 5.30ರ ಸುಮಾರಿಗೆ ಟಿಪ್ಪರ ವಾಹನದ ಹಿಂದಿನ ಟ್ರೈಲಿಯಲ್ಲಿ ಎರಡು ಯಾಂತ್ರೀಕೃತ ಬೋಟ್ ಬಳಸಿ ಕಳ್ಳತನದಿಂದ ಮರಳು ತುಂಬಲಾಗುತ್ತಿತ್ತು. ಇದನ್ನು ತಿಳಿದು ಇಎಸ್‌ಐ ದಾಳಿ ನಡೆಸಲಾಗಿ ಟಿಪ್ಪರ್, ಬೋಟ್ ಹಾಗೂ ಸಂಬಂಧಿಸಿದ ವಸ್ತುಗಳನ್ನು ಸ್ಥಳದಲ್ಲಿಯೇ ಬಿಟ್ಟು ದಂಧೆಕೋರರು ಪರಾರಿಯಾಗಿದ್ದಾರೆ.
ಬೋಟ್‌ಗಳು ಅಹಿರಸಂಗ ಗ್ರಾಮದ ಸೈಫನ್‌ಸಾಬ ಮಕಾಂದಾರ ಹಾಗೂ ಧೂಳಖೇಡ ಗ್ರಾಮದ ಸೂರಜಗೌಡ ಬಿರಾದಾರ ಎಂಬುವರಿಗೆ ಸೇರಿದ್ದು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಟಿಪ್ಪರ್ ಚಾಲಕ ಕಂ ಮಾಲೀಕನನ್ನು ವಿಚಾರಿಸಿದ್ದು ಆತನ ಮೇಲೆಯೂ ಪ್ರಕರಣ ದಾಖಲಾಗಿದೆ. ಒಟ್ಟು 413,000 ರೂ.ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)