ಕೊಲ್ಹಾರದ ಚೀರಲದಿನ್ನಿಯಲ್ಲಿ ಸಿಡಿಲಿನ ಆರ್ಭಟ, ಇಬ್ಬರು ಕುರಿಗಾಹಿಗಳು ಸಾವು
ವಿಜಯಪುರ: ರಾಜ್ಯಾದ್ಯಂತ ಎರಡು ದಿನಗಳ ಕಾಲ ಮಳೆಯ ಆರ್ಭಟ ಹೆಚ್ಚಾಗಲಿದ್ದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆನ್ನಲ್ಲೆ ಕೊಲ್ಹಾರ ತಾಲೂಕಿನ ಚೀರಲದಿನ್ನಿಯಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಕುರಿಗಾಹಿಗಳು ಅಸುನೀಗಿದ್ದಾರೆ.
ಮೂಲತಃ ಚಿಕ್ಕೋಡಿ ಪಟ್ಟಣದ ಜೋಡುಕುರಳಿ ಗ್ರಾಮದ ಭೀರಪ್ಪ ಬಡೆಗೋಳ ಹಾಗೂ ಮಹೇಶ ಬಡೆಗೋಳ ಸಿಡಿಲಿಗೆ ಬಲಿಯಾದವರೆನ್ನಲಾಗಿದೆ. 9 ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿವೆ.
ಮಳೆ ಬರುವ ವೇಳೆಯಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.