ವಿಜಯಪುರ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಟ್ಟಿ ಪ್ರಕಟ, ಯಾರೆಲ್ಲ ಆಯ್ಕೆಯಾಗಿದ್ದಾರೆಂಬ ಕುತೂಹಲವೇ? ಈ ವರದಿ ನೋಡಿ

ವಿಜಯಪುರ: ಮಹಾಮಾರಿ ಕರೊನಾದಿಂದಾಗಿ ಕಳೆದ 2021ನೇ ಸಾಲಿನಲ್ಲಿ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸರ್ಕಾರಿ ನೌಕರರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಈ ಬಾರಿ ಅದ್ದೂರಿ ಚಾಲನೆ ದೊರೆತಿದೆ.

ಸರ್ಕಾರದ ಆದೇಶದಂತೆ 2021 ಮತ್ತು 2022ನೇ ಸಾಲಿನಲ್ಲಿ ಅತ್ಯುನ್ನತ ಸೇವೆಗೈದ ರಾಜ್ಯ ಸರ್ಕಾರಿ ನೌಕರರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲಾಗುತ್ತಿದ್ದು, ಜಿಲ್ಲಾಡಳಿತ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆಗೊಳಿಸಿದೆ.

2022ನೇ ಸಾಲಿನ ಪ್ರಶಸ್ತಿಗೆ ಜಿಲ್ಲಾ ಖಜಾನೆ ಇಲಾಖೆ ಸಹಾಯಕ ನಿರ್ದೇಶಕ ವೈ.ಎಸ್. ಸೋಮನಕಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಅಸ್ಪಾಕಅಹ್ಮದ್. ಎಸ್. ಕೋಲ್ಹಾರ, ತಾಲೂಕು ಆರೋಗ್ಯ ಅಧಿಕಾರಿ ಶಶಿಧರ .ಎಸ್. ಒತಗೇರಿ, ಗ್ರೇಡ್-2 ತಹಸೀಲ್ದಾರ್ ಸುರೇಶ ಚಾವಲರ, ಪ್ರಥಮ ದರ್ಜೆ ಸಹಾಯಕ ಅಬ್ದುಲ್‌ಮಜೀದ್ ಮೌಲಾಸಾಬ ಅಕ್ಕಲಕೋಟ, ಪಿಡಿಒ ಜಿ.ಬಿ. ಕಲ್ಲವಗೋಲ, ಕಂದಾಯ ಇಲಾಖೆ ಪ್ರಥಮ ದರ್ಜೆ ಸಹಾಕಿ ಉಷಾ ಎಂ.ಭೋಸಲೆ, ಗ್ರಾಪಂ ಕಾರ್ಯದರ್ಶಿ ಅನ್ನಪ್ಪ ಬಿದರಿ, ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲನಗೌಡ ಎಸ್.ಗೌಡರ, ಸಂತೋಷ ಎಸ್. ಕಾಳಶೆಟ್ಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2021ನೇ ಸಾಲಿನ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿಗೆ ವೈದ್ಯಕೀಯ ಅಧಿಕಾರಿ ಡಾ.ಜೀನತ್ ಉನ್ ನಿಶಾ, ಇಂಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಅರ್ಚನಾ ಜಿ.ಕುಲಕರ್ಣಿ, ಡಾ.ಮಹೇಶ ನಾಗರಬೆಟ್ಟ, ಡಾ.ಚೆನ್ನಮ್ಮ ಕಟ್ಟಿ, ರೇವಣಸಿದ್ದಪ್ಪ ಶಂಕ್ರಪ್ಪ ಪ್ಯಾಟಿಗೌಡರ, ಸಹಾಯಕ ಕೃಷಿ ಅಧಿಕಾರಿ ಅರವಿಂದ ಹೂಗಾರ, ಶಿರಸ್ತೇದಾರ ರಾಜಶೇಖರ ಎಂ. ಹಾದಿಮನಿ, ಪಿಡಿಒ ನಿಂಗಪ್ಪ ಮುತ್ತಪ್ಪ ಬಿಸ್ಟಗೊಂಡ, ಹಾಸ್ಟೆಲ್ ವಾರ್ಡನ್ ಸಂಗಪ್ಪ ಜೈನಾಪೂರ, ಬಂದೇನವಾಜ ಎಂ.ಹತ್ತರಕಿಹಾಳ ಆಯ್ಕೆಯಾಗಿದ್ದಾರೆ. ಕರೊನಾ ಹಿನ್ನೆಲೆ 2021ನೇ ಸಾಲಿನಲ್ಲಿ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ.

ಏ. 21ರಂದು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!