ವಿಜಯಪುರ

ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಕಳ್ಳರ ಬಂಧನ, 3.68 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶ

ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 3.68 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ಸ್ಥಳೀಯ ಗಚ್ಚಿನಕಟ್ಟಿ ಕಾಲನಿ ನಿವಾಸಿ ಸಾಯಿ ಊರ್ಫ್ ಗುಂಡ್ಯಾ ಲಕ್ಷ್ಮಣ ಪವಾರ (19) ಹಾಗೂ ಸಂದೀಪ ಚಂದ್ರಾಜ ಬಿರಾದಾರ ಊರ್ಫ್ ಸಕ್ರಿ (21) ಬಂಧಿತ ಆರೋಪಿಗಳು.
ಏಪ್ರಿಲ್ 21ರಂದು ಬೆಳಗ್ಗೆ ಇಂಡಿ ಬೈಪಾಸ್ ಬಳಿ ತಪಾಸಣೆಯಲ್ಲಿದ್ದ ಪೊಲೀಸರ ಕೈಗೆ ಇವರು ಸಿಕ್ಕಿ ಬಿದ್ದಿದ್ದಾರೆ. ಠಾಣೆಗೆ ಕರೆತಂದು ವಿಚಾರಿಸಲಾಗಿ ನಗರದಲ್ಲಿ ಎರಡು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ 70 ಗ್ರಾಂ ಚಿನ್ನಾಭರಣ ಹಾಗೂ 130 ಗ್ರಾಂ ಬೆಳ್ಳಿಯ ಆಭರಣ ಸೇರಿ ಒಟ್ಟು 3.68 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.
ಎಸ್‌ಪಿ ಎಚ್.ಡಿ. ಆನಂದಕುಮಾರ, ಎಎಸ್‌ಪಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಕೆ.ಸಿ. ಲಕ್ಷ್ಮಿ ನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಅವಜಿ, ಪಿಎಸ್‌ಐ ಸೋಮೇಶ ಗೆಜ್ಜಿ ಹಾಗೂ ಪಿಎಸ್‌ಐ ಪಿ.ಎಸ್. ಕುಚಬಾಳ ನೇತೃತ್ವದಲ್ಲಿ ರಚಿಸಲಾದ ಸಿಬ್ಬಂದಿ ಪಿ.ಆರ್.ಹಿಪ್ಪರಗಿ, ಐ.ಎಂ. ಬೀಳಗಿ, ವಿಕ್ರಮ ಮದಭಾವಿ, ಸುರೇಶ ಅಡಕಿ, ಎ.ಎ. ಗದ್ಯಾಳ, ಎಂ.ಬಿ. ಬಡಿಗೇರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!