ವಿಪಕ್ಷ ನಾಯಕನ ಸ್ಥಾನಕ್ಕೂ ರೇಟ್ ಫಿಕ್ಸ್ ಮಾಡಿದ್ದಾರೋ ಯಾರಿಗೆ ಗೊತ್ತು? ಸಚಿವ ಎಂ.ಬಿ. ಪಾಟೀಲ ವ್ಯಂಗ್ಯ
ಸರಕಾರ ನ್ಯೂಸ್ ವಿಜಯಪುರ
ಬಜೆಟ್ ಮಂಡನೆಯಾದರೂ ರಾಜ್ಯದಲ್ಲಿ ಬಿಜೆಪಿ ವಿಪಕ್ಷ ನಾಯಕ ಸ್ಥಾನಕ್ಕೆ ನಾಯಕನನ್ನು ಆಯ್ಕೆ ಮಾಡಿದಿರುವುದಕ್ಕೆ ಲೇವಡಿ ಮಾಡಿರುವ ಸಚಿವ ಎಂ.ಬಿ. ಪಾಟೀಲ ಆ ಸ್ಥಾನವನ್ನೂ ಹಣಕ್ಕೆ ಫಿಕ್ಸ್ ಮಾಡಿದ್ದಾರೋ ಯಾರಿಗೆ ಗೊತ್ತು? ಎಂದಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಪಟ್ಟಕ್ಕೆ 2500 ಕೋಟಿ ಕೊಡಬೇಕೆಂದಿದ್ದರು. ಹೀಗಾಗಿ ವಿಪಕ್ಷ ನಾಯಕ ಸ್ಥಾನಕ್ಕೂ ನೂರಾರು ಕೋಟಿ ರೂಪಾಯಿ ಫಿಕ್ಸ್ ಮಾಡಿದ್ದಾರೋ ಯಾರಿಗೆ ಗೊತ್ತು ? ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದರು.
ಇನ್ನು ಬಜೆಟ್ ಬಗ್ಗೆ ಪ್ರಲ್ಹಾದ್ ಜೋಷಿ ಟೀಕೆ ಕುರಿತು ಮಾತನಾಡುತ್ತಾ, ಪ್ರಲ್ಹಾದ ಜೋಷಿ ಅವರಿಗೆ ಬಡವರ ಬಗ್ಗೆ ಏನು ಗೊತ್ತಿದೆ? ಹೊಟ್ಟೆಯುರಿಯಿಂದ ಮಾತನಾಡಬಾರದು. ಅವರೊಬ್ಬ ಅನುಭವಿ ರಾಜಕಾರಣಿ. ಹೀಗಾಗಿ ಸುಮ್ಮನೆ ಏನೇನೋ ಮಾತನಾಡುವುದಲ್ಲ. ಅನ್ನಭಾಗ್ಯ, ಉಚಿತ ವಿದ್ಯುತ್, ಬಸ್ ಉಚಿತ ಸೌಲಭ್ಯ, ಯುವ ನಿಧಿ, ಗೃಹ ಲಕ್ಷ್ಮಿ ಇವುಗಳೆಲ್ಲವೂ ಬಡವರಿಗಾಗಿಯೇ ಮಾಡಿತ್ತು. ಹೀಗಾಗಿ ಬಜೆಟ್‌ನಲ್ಲಿ ಬಡವರನ್ನು ಕಡೆಗಣಿಸಿಲ್ಲ ಎಂದರು.
ರಾಜ್ಯದಲ್ಲಿ ಸದ್ಯಕ್ಕೆ ಪಠ್ಯ ಪರಿಷ್ಕಣೆ ಕಾರ್ಯ ನಡೆಯುತ್ತಿಲ್ಲ. ಮುಂಬರುವ ದಿನಗಳಲ್ಲಿ ಪಠ್ಯ ಪರಿಷ್ಕರಣೆ ವೇಳೆ ಬಸವಾದಿ ಶರಣರು, ಡಾ.ಬಾಬಾಸಾಹೇಬ ಅಂಬೇಡ್ಕರ್, ನಾರಾಯಣಗುರು, ಕುವೆಂಪು, ಸಿದ್ಧೇಶ್ವರ ಶ್ರೀಗಳು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಬಗತ್ ಸಿಂಗ್, ನೇತಾಜಿ ಸುಭಾಷಚಂದ್ರಬೋಸ್, ಸಿದ್ದಗಂಗಾ ಶ್ರೀ, ಆದಿಚುಂಚನಗಿರಿ ಸ್ವಾಮೀಜಿ ಹೀಗೆ ಅನೇಕ ಮಹಾತ್ಮರ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸುವುದಾಗಿ ತಿಳಿಸಿದರು.