ವಿಜಯಪುರ

ಹಳೆಯ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಭಾರತ ಯಾತ್ರೆ- ಯಾವಾಗ? ಹೇಗಿರಲಿದೆ ಗೊತ್ತಾ ಯಾತ್ರೆ?

ಸರಕಾರ ನ್ಯೂಸ್ ವಿಜಯಪುರ

ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂಬುದು ಶಿಕ್ಷಕರ ಬಹುದಿನದ ಬೇಡಿಕೆ. ಆದರೆ, ಆಳುವ ವರ್ಗ ಈವರೆಗೂ ಬೇಡಿಕೆ ಈಡೇರಿಸದ ಹಿನ್ನೆಲೆ ಅಸಮಾಧಾನ, ಆಕ್ರೋಶಗೊಂಡ ಶಿಕ್ಷಕರು ಇದೀಗ ಬಹುದೊಡ್ಡ ಹೋರಾಟಕ್ಕೆ ಮುಂದಾಗಿದ್ದಾರೆ.

ಅದೇನಪ್ಪ ಹೋರಾಟ ಅಂತೀರಾ? ಇಲ್ಲಿದೆ ನೋಡಿ ಡಿಟೇಲ್ಸ್…..

ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. 5 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಗೋರಾಟ ಹಮ್ಮಿಕೊಳ್ಳಲಾಗಿದೆ.

ಸೆ. 5 ರಿಂದ ಈಗಾಗಲೇ ಭಾರತ ಯಾತ್ರೆ ಆರಂಭಗೊಂಡಿದೆ. ಕನ್ಯಾಕುಮಾರಿಯಿಂದ ಭಾರತ ಯಾತ್ರೆ ಆರಂಭವಾಗಿದ್ದು, ಕನ್ಯಾಕುಮಾರಿ, ಕೇರಳ, ತಮಿಳುನಾಡು, ಕರ್ನಾಟಕ ಮಾರ್ಗವಾಗಿ ದೆಹಲಿಯ ರಾಮಲೀಲಾ ಮೈದಾನ ತಲುಪಲಿದೆ. ಅ.5 ರಂದು ಬೃಹತ್ ಸಮಾವೇಶ ನಡೆಯಲಿದೆ ಎಂದು ಎಐಪಿಟಿಎಫ್ ಕಾರ್ಯಾಧ್ಯಕ್ಷ ಬಸವರಾಜ್ ಕುರಿಕಾರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ಶಿಕ್ಷಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು ಆಗ ಶಿಕ್ಷಕರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದರು.

ಇನ್ನು ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ಮಾಡಬೇಕು. ಅಲ್ಲದೇ, ನೂತನ ಶಿಕ್ಷಣ ನೀತಿಯಲ್ಲಿನ ಲೋಪದೋಷಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಗುವುದು. ಅಲ್ಲದೇ, ನಾಲ್ಕು ತಂಡದಿಂದ ವಿವಿಧ ಭಾಗದಿಂದ ಭಾರತ ಯಾತ್ರೆ ಏಕಕಾಲಕ್ಕೆ ಆರಂಭಿಸಲಾಗಿದೆ. ಹಳೆ ಪಿಂಚಣಿ ಯೋಜನೆಯನ್ನು ಪಂಜಾಬ್ ಸೇರಿದಂತೆ ನಾಲ್ಕು ರಾಜ್ಯದಲ್ಲಿ ಯೋಜನೆ ಜಾರಿಗೆ ಆಗಿದೆ. ಅದಕ್ಕಾಗಿ ಕರ್ನಾಟಕ ಸೇರಿದಂತೆ ಉಳಿದ ರಾಜ್ಯದಲ್ಲೂ ಈ ಯೋಜನೆ ಜಾರಿಗೆ ಮಾಡಬೇಕು. ಇಲ್ಲದೇ ಹೋದ್ರೇ ಕೇಂದ್ರ ಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಂದು ದೇಶ ಒಂದೇ ತೆರಿಗೆ ಮಾದರಿ
ಒಂದು ದೇಶ ಒಂದು ವೇತನ ಪದ್ದತಿ ಮಾಡಬೇಕು ಎಂದು ಆಗ್ರಹಿಸಲಾಗುವುದೆಂದರು.

ಸುದ್ದಿಗೋಷ್ಠಿಯಲ್ಲಿ ಕೆಎಸ್‌ಪಿಎಸ್‌ಟಿಎ ಅಧ್ಯಕ್ಷ ಕೆ. ನಾಗೇಶ, ಚಂದ್ರಶೇಖರ ನುಗ್ಗಲಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.

error: Content is protected !!