ವಿಜಯಪುರ

ಗಾಂಜಾ ಅಕ್ರಮ ಸಾಗಾಟ, ಅಬಕಾರಿ ಅಧಿಕಾರಿಗಳ ದಾಳಿ, ಬಂಧಿತರಿಂದ ಸಿಕ್ಕ ಗಾಂಜಾ ಮೌಲ್ಯ ಎಷ್ಟು ಗೊತ್ತಾ?

ಸರ್ಕಾರ್ ‌ನ್ಯೂಸ್ ವಿಜಯಪುರ

ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಅಬಕಾರಿ ಅಧಿಕಾರಿಗಳು 850 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಬಬಲೇಶ್ವರ ತಾಲೂಕಿನ ಹಲಗಣಿ ಕ್ರಾಸ್ ಬಳಿ ಗುರುವಾರ ಈ ಘಟನೆ ನಡೆದಿದ್ದು, ಕಾತ್ರಾಳ ಗ್ರಾಮದ
ಸಂಜೀವ ರಾಮಪ್ಪ ಕಾಂಬಳೆ ಹಾಗೂ ಸಿದರಾಯ ಸಂಗಪ್ಪ ಮನಗೂಳಿ ಬಂಧಿತ ಆರೋಪಿಗಳು. ಇವರಿಂದ ಗಾಂಜಾ ಹಾಗೂ ಬೈಕ್ ಸೇರಿ ಒಟ್ಟು 60 ಸಾವಿರ ರೂ.ಮೌಲ್ಯದ ಸಾಮಗ್ರಿ ಜಫ್ತು ಮಾಡಿಕೊಳ್ಳಲಾಗಿದೆ.

ಅಬಕಾರಿ ಆಯುಕ್ತರ ಮಾರ್ಗದರ್ಶನದಲ್ಲಿ
ಅಬಕಾರಿ ಪಿಎಸ್ ಐ ಪ್ರಕಾಶ ಜಾಧವ, ಪೇದೆಗಳಾದ ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ, ಪರಶುರಾಮ ತೆಲಗಿ ದಾಳಿ ನಡೆಸಿದ್ದಾರೆ.

error: Content is protected !!