ಸರಕಾರಿ ಪ್ರೌಢ ಶಾಲೆಗೆ ಕನ್ನ, ಯಾವ ಶಾಲೆ? ಎಷ್ಟು ಕಳವು?
ಸರಕಾರ್ ನ್ಯೂಸ್ ಮನಗೂಳಿ
ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರ ಕೊಠಡಿಯ ಕೀಲಿ ಮುರಿದು ಕಳ್ಳತನ ಮಾಡಿರುವ ಪ್ರಕರಣ ಬ.ಬಾಗೇವಾಡಿ ತಾಲೂಕಿನ ಯಂಭತ್ನಾಳ ಗ್ರಾಮದಲ್ಲಿ ನಡೆದಿದೆ.
ಯಂಭತ್ನಾಳದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಡಿ. 1 ರಂದು ಈ ಘಟನೆ ನಡೆದಿದ್ದು, ಇದೀಗ ಅಂದರೆ ಡಿ. 3ರಂದು ಶಾಲೆ ಮುಖ್ಯಾಪಾಧ್ಯಾಪಕಿ ಭಾರತಿ ಕೃಷ್ಣಾಜಿ ಕುಲಕರ್ಣಿ ಮನಗೂಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗ್ರಾಮದ ಎಂಎಚ್‌ಎಂ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರ ಕೊಠಡಿಯಲ್ಲಿದ್ದ ಐಸಿಟಿ ಮೂರನೇ ಹಂತದ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಸಲುವಾಗಿ ಪವರ್ ಕಂಪನಿಯ 12 ವಿ-85 ಎಸ್‌ಎಂಎಸ್ ಕಂಪನಿಯ ಅಂದಾಜು 19,200 ರೂ. ಮೌಲ್ಯದ ಒಟ್ಟು 16 ಬ್ಯಾಟರಿಗಳನ್ನು ಕಳವು ಮಾಡಿಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮನಗೂಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)