ವಿಜಯಪುರ

ಪಾಲಿಹೌಸ್ ಹೆಸರಲ್ಲಿ ಪಂಗನಾಮ, ಕೋಟಿಗೂ ಅಧಿಕ ರೂಪಾಯಿ ವಂಚನೆ !

ಸರಕಾರ ನ್ಯೂಸ್ ವಿಜಯಪುರ

ಪಾಲಿಹೌಸ್ ನಿರ್ಮಾಣದ ಹೆಸರಿನಲ್ಲಿ ಕೋಟಿಗೂ ಅಧಿಕ ರೂಪಾಯಿ ವಂಚನೆಗೈದಿರುವ ಪ್ರಕರಣ ಕೊಲ್ಹಾರದಲ್ಲಿ ಬೆಳಕಿಗೆ ಬಂದಿದೆ !

ಕೊಲ್ಹಾರದ ಸಿದ್ದಪ್ಪ ದುಂಡಪ್ಪ ಬಾಲಗೊಂಡ ವಂಚನೆಗೊಳಗಾದ ರೈತ. ಕೊಲ್ಹಾರದಲ್ಲಿ 60 ಎಕರೆ ಜಮೀನಿನಲ್ಲಿ ಒಕ್ಕಲುತನ ಮಾಡಿಕೊಂಡಿರುವ ಇವರು 2017ರಲ್ಲಿ ಪಾಲಿಹೌಸ್ ಯೋಜನೆ ನಂಬಿ ಮೋಸ ಹೋಗಿದ್ದಾರೆ.

ದೇವದಾಸ್ ಗಾಂವಕರ ಎಂಬ ಸನ್ ಬಯೋ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್‌ನ ಮಾತು ನಂಬಿ ಸಿದ್ದಪ್ಪ ಹಣ ತೊಡಗಿಸಿದ್ದಾರೆ. ಒಂದು ಎಕರೆಯಲ್ಲಿ ಪಾಲಿಹೌಸ್ ನಿರ್ಮಾಣಕ್ಕೆ 40 ಲಕ್ಷ ರೂಪಾಯಿ ಖರ್ಚು ಆಗಲಿದ್ದು, ಕೇಂದ್ರ ಸರ್ಕಾರದಿಂದ ಶೇ. 50 ಸಬ್ಸಿಡಿ ಸಿಗಲಿದೆ. ಪ್ರತಿಶತಃ 25ರಷ್ಟು ಹಣ ರೈತರು ನೀಡಿದರೆ ಇನ್ನುಳಿದ ಶೇ.25ರಷ್ಟು ಹಣ ತಾವು ತೊಡಗಿಸಿದರೆ ಪಾಲಿಹೌಸ್ ನಿರ್ಮಿಸಿಕೊಡಲಾಗುವುದು. ಸಬ್ಸಿಡಿ ಹಣ ತಾವೇ ಪಡೆದುಕೊಳ್ಳಲಿದ್ದು, 3 ವರ್ಷ ಪಾಲಿಹೌಸ್‌ನ ಉತ್ಪನ್ನ ತಾವೇ ಪಡೆದುಕೊಳ್ಳುವುದಾಗಿಯೂ, ಪ್ರತಿ ಎಕರೆ ಪಾಲಿಹೌಸ್‌ನಲ್ಲಿ ರೈತರ ಕಡೆಯ ಇಬ್ಬರನ್ನು ಕೆಲಸಕ್ಕೆ ನೇಮಿಸಿ ತಿಂಗಳಿಗೆ ತಲಾ 25 ಸಾವರಿ ರೂಪಾಯಿ ಸಂಬಳ ನೀಡುವುದಾಗಿ ದೇವದಾಸ್ ಗಾಂವಕರ ತಿಳಿಸಿದ್ದಾನೆ.

ಅಲ್ಲದೇ,

ಮದ್ಯಸೇವಿಸಿ ಶಾಲೆಗೆ ಬಂದ ಶಿಕ್ಷಕ, ಅಮಾನತ್ತುಗೊಳಿಸಿ ಆದೇಶಿಸಿದ ಡಿಡಿಪಿಐ

3 ವರ್ಷದ ನಂತರ ಪಾಲಿಹೌಸ್ ಮರಳಿ ರೈತರಿಗೆ ನೀಡಲಾಗುವುದು. ಪ್ರತಿ ವರ್ಷ 20-30 ಲಕ್ಷ ಆದಾಯ ಬರುವುದಲ್ಲದೇ ಈಗಾಗಲೇ ಗೋವಾದಲ್ಲಿ ಈ ರೀತಿ ಆದಾಯ ಗಳಿಸುತ್ತಿದ್ದಾರೆಂದು ನಂಬಿಸಿದ್ದು, ಅದನ್ನು ನಂಬಿದ ಸಿದ್ದಪ್ಪ ತಮ್ಮ 14 ಎಕರೆ ಜಮೀನಿನಲ್ಲಿ 14 ಪಾಲಿಹೌಸ್ ನಿರ್ಮಾಣ ಮಾಡಲು ತೀರ್ಮಾನಿಸಿದ್ದಾರೆ. ಹಂತ ಹಂತವಾಗಿ 1.26 ಕೋಟಿ ರೂಪಾಯಿ ಬ್ಯಾಂಕ್ ಖಾತೆಯಿಂದ ರವಾನಿಸಿದ್ದಾರೆ.

ಆದರೆ, ಏಳು ವರ್ಷಗಳಾದರೂ ದೇವದಾಸ್ ಗಾಂವಕರ್ ಪಾಲಿಹೌಸ್ ನಿರ್ಮಾಣ ಮಾಡಿಕೊಟ್ಟಿಲ್ಲ. ಹೀಗಾಗಿ ರೈತ ಸಿದ್ದಪ್ಪ ಬಾಲಗೊಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!