ಶಕ್ತಿ ಯೋಜನೆಯಡಿ ವಿಜಯಪುರದಲ್ಲಿ ಎಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ ಗೊತ್ತಾ? ಅಚ್ಚರಿಯಾಗದಿರಲಾರದು….!
ಸರಕಾರ ನ್ಯೂಸ್ ವಿಜಯಪುರ
ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ರಾಜ್ಯದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ವಿಜಯಪುರ ಜಿಲ್ಲೆಯ ಪಾಲಿಗೆ ದೊಡ್ಡ ಪ್ರಮಾಣದಲ್ಲಿಯೇ ಸದುಪಯೋಗವಾಗಿದೆ.
ಹೌದು, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಮಹಿಳೆಯರಿಗಾಗಿ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆಯಡಿ ಆಗಸ್ಟ್,15 ರವರೆಗೆ ಜಿಲ್ಲೆಯ ನಿಗಮದ ಸಾರಿಗೆಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 1,03,65,919 ಜನರು ಪ್ರಯಾಣಿಸುವ ಮೂಲಕ ಶಕ್ತಿ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ.
ಶಕ್ತಿ ಯೋಜನೆ ಚಾಲನೆ ದೊರೆತ ಜೂನ್-2023ರ 11ರಿಂದ ಜೂನ್-30ರವರೆಗೆ 25,92,580 ಮಹಿಳೆಯರು, ಜುಲೈ-01 ರಿಂದ ಜುಲೈ 30ರವರೆಗೆ 51,43,150 ಹಾಗೂ ಆಗಸ್ಟ್ -01ರಿಂದ 15ರವರೆಗೆ 26,30,180 ಮಹಿಳೆಯರು ಸೇರಿದಂತೆ ಒಟ್ಟು 1,03,65,919 ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)