ವಿಜಯಪುರ

ಬ್ಲಾಕ್‌ ಮನಿ ವೈಟ್‌ ಮಾಡಿಕೊಟ್ಟರೆ ಮೂರ್ನಾಲ್ಕು ಪಟ್ಟು ಹಣ ಕೊಡುವುದಾಗಿ ಮೋಸ…ಬರೋಬ್ಬರಿ 20 ಲಕ್ಷ ರೂ.ವಂಚನೆ, ಇಲ್ಲಿದೆ ಇಂಟ್ರೆಸ್ಟಿಂಗ್‌ ಕಹಾನಿ…!

ಸರಕಾರ ನ್ಯೂಸ್‌ ವಿಜಯಪುರ

ಬ್ಲಾಕ್‌ ಮನಿ ವೈಟ್‌ ಮಾಡಿ ಕೊಟ್ಟರೆ ಅದರ ಮೂರು-ನಾಲ್ಕು ಪಟ್ಟು ಬ್ಲ್ಯಾಕ್‌ ಮನಿ ಕೊಡುವುದಾಗಿ ನಂಬಿಸಿ ರೈತನಿಂದ ಬರೋಬ್ಬರಿ 20 ಲಕ್ಷ ರೂ.ವಂಚನೆಗೈದ ಇಂಟ್ರೆಸ್ಟಿಂಗ್‌ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬಬಲೇಶ್ವರದ ಬಸಪ್ಪಯ್ಯ ವೃತ್ತದ ಬಳಿಯ ನಿವಾಸಿ ಚಂದ್ರಶೇಖರ ಬಸಪ್ಪ ಕನ್ನೂರ ಎಂಬುವರು ಮೋಸಕ್ಕೆ ಬಲಿಯಾಗಿದ್ದು, 20 ಲಕ್ಷ ಕಳೆದುಕೊಂಡಿದ್ದಾರೆ. ನೊಂದ ಚಂದ್ರಶೇಖರ ಇದೀಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸಂಗಣಕೇರಿಯ ಲಕ್ಷ್ಮಿ ರಾಮಪ್ಪ ಕಂಕನವಾಡಿ, ಹೊಳದೂರು ಗ್ರಾಮದ ಈರಣ್ಣ ರುದ್ರಪ್ಪ ಕೌಜಲಗಿ, ಹಲಗಾ ಗ್ರಾಮದ ಅಪ್ಪಾಸಾಹೇಬ ಬಾಬು ಇಂಚಲ್‌ ಹಾಗೂ ಚಿಕ್ಕೋಡಿಯ ಸುನೀಲ ಕಾಶಿನಾಥ ದೊಡ್ಡಮನಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?

ಮೇಲಿನ ನಾಲ್ವರು ಆರೋಪಿಗಳು ಚಂದ್ರಶೇಖರನನ್ನು ಸಂಪರ್ಕಿಸಿ ತಮ್ಮ ಬಳಿ ಬ್ಲ್ಯಾಕ್‌ ಮನಿ ಇದ್ದು, ವೈಟ್‌ ಮಾಡಿಕೊಟ್ಟರೆ ಅದರ ಮೂರು-ನಾಲ್ಕು ಪಟ್ಟು ಹಣ ಕೊಡುವುದಾಗಿ ಫೋನ್‌ ಮೂಲಕ ಒತ್ತಾಯಿಸಿದ್ದಾರೆ. ಪದೇ ಪದೇ ಫೋನ್‌ ಮಾಡಿ ನಂಬಿಕೆ ಬರುವ ಹಾಗೆ ಮಾಡಿದ್ದಾರೆ. ಆರಂಭದಲ್ಲಿ 5000 ರೂಪಾಯಿ ತಂದು ಕೊಟ್ಟು ಹಣ ಚಲಾವಣೆ ಮಾಡಿಸಿ ಮತ್ತಷ್ಟು ನಂಬಿಕೆ ಬರುವಂತೆ ಮಾಡಿದ್ದಾರೆ. 2023 ಆ. 3 ರಂದು ನಾಲ್ವರು ಆರೋಪಿಗಳು ಕಾರ್‌ನಲ್ಲಿ ಬಂದು ಶಹರದ ಅತಾಲಟ್ಟಿ ರಸ್ತೆಯ ಮೇಲೆ ರಾಮಕೃಷ್ಣ ಆಶ್ರಮದ ಹತ್ತಿರ ಚಂದ್ರಶೇಖರನಿಂದ 20 ಲಕ್ಷ ರೂಪಾಯಿ ತೆಗೆದುಕೊಂಡು ಖಾಲಿ ಪೇಪರ್‌ ಹಾಗೂ ನೋಟ್ಬುಕ್‌ ಹಾಕಿ ಪ್ಯಾಕ್‌ ಮಾಡಿದ ಒಂದು ರಟ್ಟಿನ ಬಾಕ್ಸ್‌ ತೋರಿಸಿದ್ದಾರೆ. ಅದರಲ್ಲಿ 1 ಕೋಟಿ ರೂಪಾಯಿ ಬ್ಲ್ಯಾಕ್‌ ಮನಿ ಇದೆ ಎಂದು ನಂಬಿಸಿದ್ದಾರೆ. ಆ ರಟ್ಟಿನ ಬಾಕ್ಸ್‌ ಚಂದ್ರಶೇಖರನಿಗೆ ಕೊಟ್ಟು ಆತನಿಂದ 20 ಲಕ್ಷ ರೂಪಾಯಿ ತೆಗೆದುಕೊಂಡು ಮೋಸ ಮಾಡಿದ್ದಾರೆ.

ದೂರು ದಾಖಲು:

ಮೋಸಕ್ಕೆ ಒಳಗಾದ ಚಂದ್ರಶೇಖರ ಇದೀಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಎಸ್‌ಪಿ ಎಚ್‌.ಡಿ. ಆನಂದಕುಮಾರ ಅವರು ಎಎಸ್‌ಪಿ, ಡಿವೈಎಸ್‌ಪಿ ಹಾಗೂ ಸೈಬರ್‌ ಕ್ರೈಮ್‌ನ ಚಾಣಾಕ್ಷ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ಕಿರಾತಕರ ಜನ್ಮ ಜಾಲಾಡಲು ತಂಡ ಕಟ್ಟಿದ್ದಾರೆ. ಚಂದ್ರಶೇಖರನಿಗೆ ನ್ಯಾಯ ಕಲ್ಪಿಸುವ ಸಂಕಲ್ಪ ತೊಟ್ಟಿರುವ ಪೊಲೀಸರ ತಂಡ ಈಗಾಗಲೇ ಆರೋಪಿಗಳ ಪತ್ತೆಗೆ ಜಾಲ ಬೀಸಿದೆ. ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ.
ಅಂದ ಹಾಗೆ ಇಂಥ ಮೋಸ-ವಂಚನೆಗಳಿಗೆ ಬಲಿಯಾಗದೆ ಪ್ರಾಮಾಣಿಕ ದುಡಿಮೆಗೆ ಆದ್ಯತೆ ನೀಡುವುದೇ ಸದ್ಯಕ್ಕೆ ಇಂಥ ಪ್ರಕರಣಗಳಿಗೆ ಪರಿಹಾರ. ಏನಂತೀರಿ?

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!