ವಿಜಯಪುರ

ಪಿಕೆಪಿಎಸ್‌ನಲ್ಲಿ ಏಳು ಕೋಟಿ ಅವ್ಯವಹಾರ, ರೈತರಿಗೆ ಮಹಾ ಮೋಸ, ಬೆಚ್ಚಿ ಬೀಳಿಸುವ ಪ್ರಕರಣ ಡಿಟೇಲ್ಸ್‌ ಇಲ್ಲಿದೆ ನೋಡಿ

ಸರಕಾರ ನ್ಯೂಸ್‌ ಚಡಚಣ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಏಳು ಕೋಟಿ ರೂಪಾಯಿಗೂ ಅಧಿಕ ಅವ್ಯವಹಾ ನಡೆದಿದ್ದು, ರೈತರನ್ನು ಬೆಚ್ಚಿ ಬೀಳಿಸಿದೆ.

ಚಡಚಣ ತಾಲೂಕಿನ ನಂದರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಸಂಘದ ಸಿಇಒ ವಿವೇಕಾನಂದ ಗಿರೆಪ್ಪ ಬಿರಾದಾರ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಭಾರ ಸಿಇಒ ರಾಜಕುಮಾರ ಮಲ್ಲನಗೌಡ ಪಾಟೀಲ ದೂರು ನೀಡಿದ್ದಾರೆ.

ಏನಿದು ಪ್ರಕರಣ?

ಆರೋಪಿತ ವಿವೇಕಾನಂದನು 2014ರಲ್ಲಿ ಸಂಘದ ಸಿಇಒ ಎಂದು ನೇಮಕಗೊಂಡಿದ್ದು, ಸಂಬಂಧ ಪಟ್ಟ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದನು. ರೈತಾಪಿ ಜನರಿಗೆ ಸಾಲ ಬಟವಡೆ ಮಾಡುವುದು ಮತ್ತು ಸಾಲ ವಸೂಲಾತಿ ಮಾಡಿ ಸಂಘದ ಖಾತೆಗೆ ಜಮಾ ಮಾಡುವ ಕರ್ತವ್ಯ ನಿರ್ವಹಿಸುತ್ತಿದ್ದನು.

ಆ ಪ್ರಕಾರ 2019-20 ಮತ್ತು 2020-21ನೇ ಸಾಲಿನಲ್ಲಿ ನಡೆದ ಕರ್ನಾಟಕ ಸಹಕಾರಿ ಸಂಘದ ಕಾಯ್ದೆ 1959ರ ಕಲಂ : 64 ಶಾಸನ ಬದ್ಧ ವಿಚಾರಾಣಧಿಕಾರಿಗಳು ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿಗಳು ವಿಚಾರಣೆ ನಡೆಸಿ ಮತ್ತು ಲೆಕ್ಕ ಪರಿಶೋಧನೆ ವರದಿ ಪ್ರಕಾರ ವಿವೇಕಾನಂದ ವಿವಿಧ ಮೂಲಗಳಿಂದ ಜಮಾ ಆದ ಒಟ್ಟು 7,23,72,702 ರೂಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಆ ಮೂಲಕ ಸಂಘಕ್ಕೆ, ರೈತರಿಗೆ ಮೋಸ ಮಾಡಿದ್ದಾನೆ. ಈತ ಮೇಲೆ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!