ವಿಜಯಪುರ

ಭೀಕರ ಅಪಘಾತ, ಕಾರು- ಟಾಟಾ ಏಸ್ ನುಜ್ಜುಗುಜ್ಜು, ಯಾರಿಗೆ ಏನಾಯ್ತು?

ಸರಕಾರ ನ್ಯೂಸ್ ಬಬಲೇಶ್ವರ

ಕಾರ್ ಮತ್ತು ಟಾಟಾ ಏಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ‌‌.

ಬಬಲೇಶ್ವರ ಪಟ್ಟಣದ ಕಾರಜೋಳ ಕ್ರಾಸ್ ಬಳಿ ಭಾನುವಾರ ಅಪಘಾತ ಸಂಭವಿಸಿದೆ.

ಅಪಘಾತ ಕ್ಕೆ ಅತಿಯಾದ ವೇಗವೇ ಕಾರಣ. ಎರಡೂ ವಾಹನಗಳ ಪರಸ್ಪರ ಡಿಕ್ಕಿಯಿಂದಾಗಿ ವಾಹನಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ‌. ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಬಬಲೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!