ಸ್ವಿಫ್ಟ್ ಕಾರು ಡಿಕ್ಕಿ; ಕುರಿಗಳ ಧಾರುಣ ಸಾವು!!! ಎಲ್ಲಿ? ಹೇಗಾಯಿತು?
ಸರಕಾರ ನ್ಯೂಸ್ ಬ.ಬಾಗೇವಾಡಿ
ಸ್ವಿಫ್ಟ್ ಕಾರು ಡಿಕ್ಕಿಯಾಗಿ 18 ಕುರಿಗಳು ಧಾರುಣವಾಗಿ ಸಾವಿಗೀಡಾಗಿವೆ.
ಬಸವನಬಾಗೇವಾಡಿ ತಾಲ್ಲೂಕಿನ ಮುತ್ತಗಿ ಕ್ರಾಸ್ ಬಳಿ ಘಟನೆ ಶನಿವಾರ ಈ ಘಟನೆ ನಡೆದಿದೆ.
ರಸ್ತೆ ದಾಟುವ ವೇಳೆ ಸ್ವಿಫ್ಟ್ ಕಾರು ಕುರಿಗಳಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಮುತ್ತಗಿ ಗ್ರಾಮದ ನಿವಾಸಿ ಆನಂದ ಎಂಬುವರಿಗೆ ಸೇರಿದ ಕುರಿಗಳು ಇವಾಗಿದ್ದು, ಕಾರು ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ.
ಮನಗೂಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)