ಮದ್ಯಸೇವಿಸಿ ಶಾಲೆಗೆ ಬಂದ ಶಿಕ್ಷಕ, ಅಮಾನತ್ತುಗೊಳಿಸಿ ಆದೇಶಿಸಿದ ಡಿಡಿಪಿಐ
ಸರಕಾರ ನ್ಯೂಸ್ ವಿಜಯಪುರ
ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಮಾಡಬೇಕಾದ ಶಿಕ್ಷಕನೇ ಮದ್ಯ ಸೇವಿಸಿ ಶಾಲೆಗೆ ಬಂದ ಹಿನ್ನೆಲೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ವಿಜಯಪುರ ಗ್ರಾಮೀಣ ವಲಯದ ಬಬಲೇಶ್ವರ ತಾಲೂಕಿನ ಕಂಬಾಗಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎ.ಸಿ. ನಾರಾಯಣಪುರ ಅಮಾನತ್ತುಗೊಂಡ ಶಿಕ್ಷಕ.
ಜು. 13 ರಂದು ಬೆಳಗ್ಗೆ ಶಾಲೆಗೆ ಬಂದು ಶಾಲೆಯಲ್ಲಿಯೇ ಮದ್ಯಪಾನ ಮಾಡಿ ತರಗತಿ ಕೋಣೆಯಲ್ಲಿ ಕುಳಿತಿದ್ದನು. ಈ ಬಗ್ಗೆ ಶಾಲೆಗೆ ಜಮೀನು ದಾನ ಮಾಡಿದ್ದ ಹಮಶಿದ್ಧ ಒಡೆಯರ ಎಂಬುವರು ಮಾಹಿತಿ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೇ ಶಾಲೆಗೆ ಹೋಗಿ ನೋಡಲಾಗಿತ್ತು. ಬಳಿಕ ಸರ್ಕಾರಿ ವಾಹನದಲ್ಲಿ ಆತನನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಜಿಲ್ಲಾಸ್ಪತ್ರೆ ವೈದ್ಯರು ಶಿಕ್ಷಕ ನಾರಾಯಣಪುರ ಮದ್ಯಪಾನ ಮಾಡಿರುವ ಬಗ್ಗೆ ದೃಢೀಕರಿಸಿದ್ದರಿಂದ ಆತನನ್ನು ಅಮಾನತ್ತುಗೊಳಿಸಲಾಗಿದೆ ಎಂದು ಡಿಡಿಪಿಐ ನಾಗೂರ ತಿಳಿಸಿದ್ದಾರೆ.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಿರೇಮಸಳಿಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ಸಂಸತ್ ರಚನೆ
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೂಲಮಟ್ಟಿ ಇವರ ವರದಿಯನ್ನಾಧರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಮಾಡಬೇಕಾದವರು ಹಾಗೂ ಸಮಾಜಕ್ಕೆ ಮಾದರಿ ಆಗಿರಬೇಕಾದ ಶಿಕ್ಷಕರೇ ಶಾಲಾ ಅವಧಿಯಲ್ಲಿಯೇ ಶಾಲಾ ಕೋಣೆಯಲ್ಲಿಯೇ ಮದ್ಯಪಾನ ಮಾಡಿ ಕರ್ತವ್ಯಲೋಪವೆಸಗಿದ್ದರಿಂದ ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಇವರಿಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಹ ಶಿಕ್ಷಕ ಎ. ಸಿ. ನಾರಾಯಣಪುರ ಇವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಡಿಡಿಪಿಐ ಎನ್.ಎಚ್. ನಾಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)