ವಿಜಯಪುರ

ಗ್ರಾಪಂ ಸದಸ್ಯರ ಗೌರವ ಧನ ಹೆಚ್ಚಳ ತೃಪ್ತಿ ತಂದಿಲ್ಲ, ವಿಪ ಸದಸ್ಯ ಸುನೀಲಗೌಡ ಹೇಳಿದ್ದೇನು ಗೊತ್ತಾ?

ಸರಕಾರ್‌ ನ್ಯೂಸ್‌ ವಿಜಯಪುರ

ರಾಜ್ಯ ಸರ್ಕಾರ ಗ್ರಾಪಂ ಜನಪ್ರತಿನಿಧಿಗಳ‌ ಗೌರವ ಧನ‌ ಹೆಚ್ಚಳ ಮಾಡಿದೆ.  ಆದರೆ, ಇದು ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ ಎಂದು ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ‌ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಗ್ರಾ. ಪಂ. ಜನಪ್ರತಿನಿಧಿಗಳಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ಒದಗಿಸುವಂತೆ ಸದನದ ಒಳಗೆ ಮತ್ತು ಹೊರಗೆ ಹಲವಾರು ಬಾರಿ ಧ್ವನಿ ಎತ್ತುತ್ತ ಹೋರಾಟ ನಡೆಸಿದ್ದೇನೆ.  ಈಗ ರಾಜ್ಯ ಸರಕಾರ ಗೌರವ ಧನ ಹೆಚ್ಚಳ ಮಾಡಿದೆ.  ಆದರೆ, ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದಿದ್ದಾರೆ.

‌ಈವರೆಗೆ ಗ್ರಾಪಂ ಅಧ್ಯಕ್ಷರಿಗೆ ರೂ. 3000, ಉಪಾಧ್ಯಕ್ಷರಿಗೆ ರೂ. 2000 ಮತ್ತು ಸದಸ್ಯರಿಗೆ ರೂ. 1000 ಗೌರವ ಧನ ನೀಡಲಾಗುತ್ತಿದೆ.  ಈಗ ಸರಕಾರ ಅಧ್ಯಕ್ಷರಿಗೆ ರೂ.‌ 6000, ಉಪಾಧ್ಯಕ್ಷರಿಗೆ ರೂ.‌ 4000 ಮತ್ತು ಸದಸ್ಯರಿಗೆ ರೂ. 2000 ಮಾಸಿಕ ಗೌರವಧನ ಹೆಚ್ಚಳ ಮಾಡಿದೆ.  ಇದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರಳ ಮಾದರಿಯಲ್ಲಿ ಅಧ್ಯಕ್ಷರಿಗೆ ರೂ. 13000, ಉಪಾಧ್ಯಕ್ಷರಿಗೆ ರೂ. 10000 ಮತ್ತು ಸದಸ್ಯರಿಗೆ ರೂ. 7000 ಮಾಸಿಕ ಗೌರವ ಧನ ನೀಡಬೇಕು.  ಇಲ್ಲದಿದ್ದರೆ, ಮತ್ತೆ ಹೋರಾಟ ಮುಂದುವರೆಸುವುದಾಗಿ ಸುನೀಲಗೌಡ ಪಾಟೀಲ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!