ವಿಜಯಪುರ

ಲೋಣಿ ಬಿಕೆ ಗ್ರಾಮದಲ್ಲಿ ಮಡುಗಟ್ಟಿದ ದುಃಖ, ಮೃತ ಯೋಧನಿಗೆ ಅಂತಿಮ ನಮನ

ಇಂಡಿ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಆಕಸ್ಮಿಕವಾಗಿ ಗುಂಡು ತಗಲು ಮರಣ ಹೊಂದಿದ್ದ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದ ಯೋಧ ದಯಾನಂದ ಮಲ್ಲಿಕಾರ್ಜುನ ಪಾಟೀಲ (28) ಪಾರ್ಥಿವ ಶರೀರ ಗುರುವಾರ ಸ್ವಗ್ರಾಮ ತಲುಪಿತು.
ಏ. 12 ರಂದು ಶ್ರೀನಗರದಲ್ಲಿ ಸೇವೆಯಲ್ಲಿರುವಾಗಲೇ ದಯಾನಂದ ಅಸುನೀಗಿದ್ದರು. ಜಮ್ಮುದಿಂದ ಕಾಶ್ಮೀರ ಮೂಲಕ ದೆಹಲಿ ಪುಣೆ ಮಾರ್ಗವಾಗಿ ಸೋಲಾಪೂರದಿಂದ ಝಳಕಿಗೆ ಇಂದು ಪಾರ್ಥಿವ ಶರೀರ ತಲುಪಿತು. ಅಲ್ಲಿಂದ ಸ್ವಗ್ರಾಮ ಲೋಣಿ ಬಿಕೆಗೆ ತಂದು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.
ಗ್ರಾಮದ ರುದ್ರಮಹಾರಾಜರ ಮಠದ ಆವರಣದಲ್ಲಿ ಸಾರ್ವಜನಿಕರಿಗೆ ಅಂತ್ಯ ದರ್ಶನ ಪಡೆಯಲು ತಾಲೂಕು ಆಡಳಿತ ದಿಂದ ವ್ಯವಸ್ಥೆ ಮಾಡಲಾಯಿತು. ಕಳೆದ ಐದಾರು ವರ್ಷದ ಹಿಂದೆ ಸೇನೆಗೆ ಸೇರಿದ್ದ ದಯಾನಂದ, ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಸ್ವ ಗ್ರಾಮ ಲೋಣಿ ಬಿಕೆ ಗ್ರಾಮದಲ್ಲಿ ದುಃಖ ಮಡುಗಟ್ಟಿತ್ತು. ಇದೀಗ ಗ್ರಾಮಸ್ಥರು ಹಾಗೂ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು.
ಮಾಜಿ ಶಾಸಕ ವಿಠಲ ಕಟಕಧೋಂಡ , ಅಧಿಕಾರಿ ಯೋಗೇಶ ದಿಕ್ಷೀತ, ಸಾಹೇಬಗೌಡ ಪಾಟೀಲ ಮುಂತಾದವರು ಇದ್ದರು.

error: Content is protected !!