ವಿಜಯಪುರ

ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಶಿಕ್ಷೆ, ಏನಿದು ಪ್ರಕರಣ? ಇಲ್ಲಿದೆ ಡಿಟೇಲ್ಸ್

ಸರಕಾರ ನ್ಯೂಸ್‌ ವಿಜಯಪುರ

ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.

ಶರಣಸೋಮನಾಳ ಗ್ರಾಮದ ಮೈಬೂಬಾಷಾ ಹನೀಪಾಶಾ ಮಕಾಂದಾರ ಶಿಕ್ಷೆಗೆ ಗುರಿಯಾಗಿದ್ದಾನೆ. 2022 ಜ. 11 ರಂದು ರಾತ್ರಿ 1.30ರ ಸುಮಾರಿಗೆ ಮೈಬೂಬಾಷಾ ತನ್ನ ಪತ್ನಿ ಬಿಸ್ಮಿಲ್ಲಾಳ ನಡತೆ ಶಂಕಿಸಿ ಜಗಳ ಕಾಯ್ದಿದ್ದಲ್ಲದೇ ರಾತ್ರಿ ಮಲಗಿದ್ದಾಗ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದನು. ಬಿಡಿಸಿ ಹೋಗಿದ್ದ ಮಕ್ಕಳಾದ ಫರೀದಾ, ಹಮೀದಾ, ಖಾದರಬಾಷಾ, ಶಮಸಾದಗೆ ಜೀವ ಭಯ ಹಾಕಿದ್ದನು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಭಾಸ ಸಂಕದ ಮೈಬೂಬಾಷಾಗೆ ಶಿಕ್ಷೆ ವಿಧಿಸಿದ್ದಾರೆ. ಸಿಪಿಐ ಬಿ.ಎಂ. ಪಾಟೀಲ ಪ್ರಕರಣದ ತನಿಖೆ ನಡೆಸಿದ್ದರು. ಸರ್ಕಾರಿ ಅಭಿಯೋಜಕಿ ವಿ.ಎಸ್. ಇಟಗಿ ವಾದ ಮಂಡಿಸಿದ್ದರು.

error: Content is protected !!