ಕುರಿಮರಿ ರಕ್ಷಣೆಗೆ ಕಾಲುವೆಗೆ ಇಳಿದವ ನೀರು ಪಾಲು..
ವಿಜಯಪುರ: ಕುರಿ ಮರಿ ರಕ್ಷಣೆ ಮಾಡಲು ಹೋಗಿ ಕುರುಗಾಯಿ ಯುವಕನೊಬ್ಬ ಕಾಲುವೆ ನೀರಲ್ಲಿ ಕೊಚ್ಚಿ ಹೋದ ಘಟನೆ ವಿಜಯಪುರ ಜಿಲ್ಲೆಯ ನಾಲ್ವತವಾಡ ಬಳಿಯ ನಾಗಬೇನಾಳ ಗ್ರಾಮದಲ್ಲಿ ನಡೆದಿದೆ. ಇದೆ ಗ್ರಾಮದ 28 ವರ್ಷದ ಮಂಜುನಾಥ ಕುರಿಮರಿ ರಕ್ಷಣೆ ಹೋಗಿ ಸಾವನ್ನಪ್ಪಿದ ಕುರಿಗಾಯಿ. ನಿನ್ನೆ ಕುರಿಕಾಯಲು ಮಂಜುನಾಥ ನಾಗಬೇನಾಳ ಗ್ರಾಮದ ಹೊರವಲಯದ ನಾರಾಯಣಪೂರ ಎಡದಂಡೆ ಕಾಲುವೆ ಬಳಿ ಹೋದಾಗ ದುರ್ಘಟನೆ ನಡೆದಿದೆ. ಕಾಲುವೆಗೆ ಬಿದ್ದ ಕುರಿ ಮರಿಯ ರಕ್ಷಣೆಗೆ ದಾವಿಸಿ ಮಂಜುನಾಥ ಕಾಲುವೆಗೆ ಹಾರಿದ್ದಾನೆ. ಕಾಲುವೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದ ಕಾರಣ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಇನ್ನು ಸ್ಥಳಕ್ಕೆ ಆಗಮಿಸಿರುವ ಅಗ್ನಿ ಶಾಮಕ ಸಿಬ್ಬಂದಿ ಮಂಜುನಾಥ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.