ಭೀಮಾತೀರದಲ್ಲಿ ಭೀಕರ ಕೊಲೆ, ತಾಯಿಯ ಜೊತೆಗಿನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ !
ಸರಕಾರ್ ನ್ಯೂಸ್ ಚಡಚಣ
ಭೀಮಾತೀರದಲ್ಲಿ ಅನೈತಿಕ ಸಂಬಂಧ ಹಿನ್ನೆಲೆ ಮತ್ತೊಂದು ಭೀಕರ ಕೊಲೆ ನಡೆದಿದೆ !
ಕೊಲೆ, ರಕ್ತಪಾತಗಳಿಂದಲೇ ಕುಖ್ಯಾತಿ ಗಳಿಸಿರುವ ಭೀಮಾತೀರ ಖ್ಯಾತಿಯ ಚಡಚಣದಲ್ಲಿ ಶನಿವಾರ ಕೊಲೆ ನಡೆದಿದ್ದು, ಕೃತ್ಯಕ್ಕೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿದೆ.
ಸ್ಥಳೀಯ ನಿವಾಸಿ ತುಕಾರಾಮ ಚವಾಣ್ (60) ಕೊಲೆಯಾದ ವ್ಯಕ್ತಿ. ಈತ 45 ವರ್ಷದ ತಂಗೆವ್ವ ಎಂಬುವರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ರಾತ್ರಿ ತಂಗೆವ್ವಳೊಂದಿಗೆ ಮಲಗಿದ್ದಾಗ ತಂಗೆವ್ವನ ಮಕ್ಕಳಾದ ಸದಾಶಿವ ಬಂಗಾರತಳಿ, ಚಿಕ್ಕು ಬಂಗಾರತಳಿ, ಪತಿ ಸಿದ್ದು ಬಂಗಾರತಳಿ ತುಕಾರಾಮನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣವನ್ನು ಮಿಂಚಿನ ವೇಗದಲ್ಲಿ ಭೇದಿಸಿರುವ ಚಡಚಣ ಪೊಲೀಸರು ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಆರೋಪಿಗಳನ್ನು ಬಂಧಿ ತಂದಿದ್ದಾರೆ. ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.