ಬಿಸಿಲೂರಿನಲ್ಲಿ ಸಿಡಿಲಿನ ಆರ್ಭಟ, ಆಮಂತ್ರಣ ಪತ್ರಿಕೆ ಕೊಡಲು ಹೋದವರಿಗೆ ಬಡಿದ ಬರಸಿಡಿಲು, ಅಯ್ಯಯ್ಯೋ ಏನಿದು ಅನಾಹುತ?
ವಿಜಯಪುರ: ಬಿಸಿಲೂರಿನಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಗುರುವಾರ ಜೀವ ಸಹಿತ ಅಪಾರ ಹಾನಿಯಾಗಿದೆ.
ವಿಜಯಪುರ ತಾಲೂಕಿನ ಡೋಣಿ ನದಿ ಬಳಿ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಮೇಲೆ ವಿಜಯಪುರಕ್ಕೆ ಬರುವಾಗ ಈ ಅವಘಡ ಸಂಭವಿಸಿದೆ.
ವಿಜಯಪುರ ನಿವಾಸಿಗಳಾದ ಶರಣಯ್ಯ ಸಂಗಮದ(45) ಹಾಗೂ ಪತ್ಮಿ ಕವಿತಾ ಸಂಗಮದ(40) ಗಾಯಗೊಂಡಿದ್ದಾರೆ.
ಗಾಯಾಳುಗಳು ವಿಜಯಪುರದ ಭಾಗ್ಯವಂತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಹಳ್ಳಿಗೆ ಹೋಗಿದ್ದ ದಂಪತಿಗಳು ವಾಪಸ್ ಬೈಕ್ ಮೇಲೆ ಬರುವಾಗ ಸಿಡಿಲು ಬಡಿದಿದೆ.
ಇಂಗಳೇಶ್ವರ ಗ್ರಾಮದ ಶರಣಪ್ಪ ಕಲ್ಲಪ್ಪ ರೆಕ್ಟಲ್ ಇವರ ಎಮ್ಮೆ ಸಿಡಿಲು ಬಡಿದು ಸಾವಿಗೀಡಾಗಿದೆ.
ಇಂಗಳೇಶ್ವರ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿ ಬಿರುಗಾಳಿಗೆ ಹಾರಿ ಹೋಗಿದೆ.
ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ ಎತ್ತು ಮರಣ ಹೊಂದಿದೆ.