ಹಳ್ಳಿ- ಹಳ್ಳಿಗಳಲ್ಲೂ ಟಿಎಸ್ ಎಸ್ ಸಂಚಲನ, ಜೈ ವಾಲ್ಮೀಕಿ -ಜೈ ತಳವಾರ ಘೋಷಣೆ ಅನುರಣನ !
ಸರಕಾರ ನ್ಯೂಸ್ ಬಬಲೇಶ್ವರ
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದ ತಳವಾರ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳ್ಳುತ್ತಿದ್ದಂತೆ ಸರ್ಕಾರಿ ಸೌಲಭ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಘಟಿತ ಹೋರಾಟಕ್ಕೆ ಸಜ್ಜಾಗುತ್ತಿದೆ.
ಅಂತೆಯೇ ಹಳ್ಳಿ ಹಳ್ಳಿಗಳಲ್ಲಿ ತಳವಾರ ಸೇವಾ ಸಮಿತಿ ರಚಿಸಿ ಆ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಂಘಟಿತರನ್ನಾಗಿಸಲಾಗುತ್ತಿದೆ. ಅದರ ಭಾಗವಾಗಿ ಇದೀಗ ಬಬಲೇಶ್ವರ ತಾಲೂಕಿನ ಹಲಗುಣಿ ಗ್ರಾಮದಲ್ಲಿ ತಳವಾರ ಸಮಾಜ ಸೇವಾ ಸಮಿತಿ ವತಿಯಿಂದ ಗ್ರಾಮ ಘಟಕ ಹಾಗೂ ಸರ್ಕಲ್ ಉದ್ಘಾಟನೆ ಮಾಡಲಾಗಿದೆ.
ಎಚ್ಚೆತ್ತುಕೊಂಡ ತಳವಾರ ಸಮುದಾಯ, ಹಳ್ಳಿ-ಹಳ್ಳಿಗಳಲ್ಲಿ ಜನಜಾಗೃತಿ ಸಭೆ, ಕೈಗೊಂಡ ನಿರ್ಣಯಗಳೇನು?
ವಿಜಯಪುರ ಜಿಲ್ಲಾ ತಳವಾರ ಸಮಾಜ ಸೇವಾ ಸಮಿತಿ ಅಧ್ಯಕ್ಷರು ಸೋಮು ಜಮಾದಾರ, ಗೌರವ ಅಧ್ಯಕ್ಷ ಶಿವಶರಣ ನಾಟಿಕಾರ್, ಉಪಾಧ್ಯಕ್ಷ ಆನಂದ ತಳವಾರ, ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಜಮಾದಾರ್, ಕಾರ್ಯದರ್ಶಿ ಚಂದು ತಳವಾರ, ನಿಂಗು ಆಲಮೇಲ, ರೇವಣ್ಣ ಹತ್ತಳಿ ಮತ್ತಿತರರು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿದರು. ಸರ್ಕಾರದ ಸೌಲಭ್ಯಗಳಿಗಾಗಿ ಸಂಘಟಿತ ಹೋರಾಟ ನಡೆಸಲು ಮನವೊಲಿಸಿದರು.
ಬಸವಂತ ತಳವಾರ, ಪರಸಪ್ಪ ದಳವಾಯಿ, ಯಲ್ಲಾಲಿಂಗ ದಳವಾಯಿ, ಸಂಗಪ್ಪ ತಳವಾರ, ರಮೇಶ್ ತಳವಾರ, ಭೀಮಶಂಕರ್
ದಳವಾಯಿ, ರಮೇಶ ದಳವಾಯಿ,
ಸದಾಶಿವ ತಳವಾರ, ಸಂತೋಷ್ ಕವಟಿಗಿ, ಹನುಮಂತು ಹೊಳೆಪ್ಪ ಗೋಳ, ಪರಶುರಾಮ್ ತಳವಾರ, ರಮೇಶ್ ಹೊಳೆಪ್ಪಗೋಳ ಮುಂತಾದವರು ಭಾಗವಹಿಸಿದ್ದರು.