ಹೆಡ್ ಕಾನಸ್ಟೇಬಲ್ ಬೈಕನ್ನೇ ಬಿಡದ ಕಳ್ಳರು, ಮನೆ ಮುಂದಿನ ಡ್ರೀಮ್‌ಯುಗಾ ಎಗರಿಸಿದ ಕಿರಾತಕರು!
ಸರಕಾರ್ ನ್ಯೂಸ್ ವಿಜಯಪುರ
ಇತ್ತೀಚೆಗೆ ಕಳ್ಳರು ಪೊಲೀಸರನ್ನೂ ಬಿಡುತ್ತಿಲ್ಲ. ಕೆಲ ದಿನಗಳ ಹಿಂದೆ ಪೊಲೀಸಪ್ಪನ ಮನೆಗೆ ಕನ್ನ ಹಾಕಿದ್ದ ಕಳ್ಳರು ಇದೀಗ ಹೆಡ್ ಕಾನಸ್ಟೇಬಲ್ ಬೈಕ್‌ನ್ನೇ ಕಳವು ಮಾಡಿದ್ಧಾರೆ.
ನಿಜ, ವಿಜಯಪುರ ಸಂಚಾರಿ ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ಸಮೀರ ಹಸನಸಾಬ ಮುಜಾವರ ಇವರ ಡ್ರೀಮ್‌ಯುಗಾ ಬೈಕ್ ಕಳುವಾಗಿದೆ. ದಿನ ನಿತ್ಯ ತನ್ನ ಕರ್ತವ್ಯ ಹಾಗೂ ವೈಯಕ್ತಿಕ ಕಾರ್ಯಗಳಿಗಾಗಿ ಬಳಸುತ್ತಿದ್ದ ಬೈಕ್‌ನ್ನೇ ಕಳ್ಳರು ಎಗರಿಸಿದ್ದಾರೆ.
ಎಂದಿನಂತೆ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಕೆಲಸ ಮುಗಿಸಿ ಮನೆಗೆ ಹೋಗಿದ್ದ ಸಮೀರ ಊಟ ಮಾಡಲೆಂದು ಬೈಕ್ ಮನೆ ಮುಂದೆ ಹಚ್ಚಿ ಒಳಗೆ ಹೋಗಿದ್ದಾರೆ. ಕೆಎ-28, ಇಎಲ್-9701, ಚೆಸ್ಸಿ ನಂಬರ್ ಎಂಇ 4ಜೆಸಿ 58 ಇಎಜಿಟಿ270891, 2016 ಮಾಡೆಲ್‌ನ ಕರಿ ಬಣ್ಣದ ಬೈಕ್ ಊಟ ಮುಗಿಸಿ ಮರಳಿ ಬಂದು ನೋಡುವಷ್ಟರಲ್ಲಿ ಕಳುವಾಗಿದೆ. ಅತ್ತ ಇತ್ತ ಹುಡುಕಾಡಿದರೂ ಸಿಗದ ನಿನ್ನೆಲೆ ಗಾಂಧಿ ಚೌಕ್ ಠಾಣೆಗೆ ದೂರು ನೀಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)