ವಿಧಾನಸಭೆ ಚುನಾವಣೆ-2023, ಅಕ್ರಮ ವೆಚ್ಚಗಳ ಕಡಿವಾಣಕ್ಕೆ ಜಿಲ್ಲಾಧಿಕಾರಿ ಆದೇಶ
ಸರಕಾರ ನ್ಯೂಸ್ ವಿಜಯಪುರ
ರಾಜ್ಯ ವಿಧಾನಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ವೆಚ್ಚ ಮಾಡಿ, ಯಾವುದೇ ಮತದಾರರಿಗೆ ಆಮಿಷ ಒಡ್ಡುವುದನ್ನು ಕಡಿವಾಣಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳಾಧ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.
ಮತದಾರರನ್ನು ಓಲೈಸಲು ಯಾವುದೇ ವ್ಯಕ್ತಿ ಲಂಚದ ಹಣ ನೀಡಬಾರದು. ಯಾವುದೇ ಮೂಲಗಳಿಂದ ಆಮಿಷ ಒಡ್ಡಬಾರದು. ಸರಕು, ಬೆಲೆಬಾಳುವ ವಸ್ತುಗಳು, ಉಡುಗೊರೆ, ಮೊಬೈಲ್ ಫೋನ್ ರಿಚಾರ್ಜ್, ಪ್ರಯಾಣ ವ್ಯವಸ್ಥೆ, ಆಹಾರ, ಇಂಧನ, ನೀಡುವ ಮೂಲಕ ಪ್ರೇರೆಪಿಸುವಂತಿಲ್ಲ.
ಮತದಾರರನ್ನು ಓಲೈಸಲು ಕೇವಲ ಆಮಿಷ ಒಡ್ಡುವುದಲ್ಲದೇ, ಮತದಾರರನಿಗೆ ಆಮಿಷಕ್ಕೊಳಪಡಿಸಲು ಯಾವುದೇ ವಸ್ತುಗಳ ಸಾಗಾಣಿಕೆ, ದಾಸ್ತಾನು ಮಾಡುವುದನ್ನು ಆದೇಶದಲ್ಲಿ ನಿಷೇಧಿಸಲಾಗಿದೆ.
ಅಗತ್ಯ ದಾಖಲೆಗಳಿಲ್ಲದೇ 50 ಸಾವಿರಕ್ಕೂ ಹೆಚ್ಚಿನ ಹಣವನ್ನು ತೆಗೆದುಕೊಂಡು ಹೋಗಬಾರದು. ನಿಷೇಧಿತ ಆದೇಶವನ್ನು ಉಲ್ಲಂಘನೆ ಮಾಡದೇ ಪ್ರತಿಯೊಬ್ಬರು ಸಹಕರಿಸುವ ಮೂಲಕ ಮುಕ್ತ, ನ್ಯಾಯಸಮ್ಮತ ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸಹಕಾರ ನೀಡುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.