ನಮ್ಮ ವಿಜಯಪುರ

ಹಾಲುಮತ ಸಮಾಜದವರು ಯಾರೂ ಶಾಸಕರಾಗಿಲ್ಲ, ಕಾರಣ ಏನು ಗೊತ್ತಾ?

ಸರಕಾರ್‌ ನ್ಯೂಸ್‌ ವಿಜಯಪುರ

ಸ್ವಾತಂತ್ರ್ಯ ನಂತರ ವಿಜಯಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಹಾಲುಮತ ಸಮಾಜದವರು ಯಾರೂ ಶಾಸಕರಾಗಿಲ್ಲ. ಇದಕ್ಕೆಲ್ಲ ಸಮಾಜ ಸಂಘಟನೆ ಕೊರತೆಯೇ ಕಾರಣವಾಗಿದೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಹಾಲುಮತ ಸಮಾಜದ ಮುಖಂಡ ರಾಮಚಂದ್ರಪ್ಪ ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಹಾಲುಮತ ಸಮಾಜದ ಪ್ರಮುಖರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಆರ್ಥಿಕ ಮತ್ತು ಸಾಮಾಜಿಕ ಸಬಲತೆಗಿಂತ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರಬೇಕು. ಅದಕ್ಕಾಗಿ ಸಮಾಜದವರಿಗೆ ಯಾವುದೇ ಪಕ್ಷದ ಟಿಕೆಟ್ ದೊರೆತಾಗ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದರೊಂದಿಗೆ ಇತರೆ ಸಮಾಜದ ವಿಶ್ವಾಸ ತೆಗೆದುಕೊಂಡಾಗ ಮಾತ್ರ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ ಎಂದರು.

ಇಲ್ಲಿಯವೆರೆಗೆ ಅಧಿಕಾರದಿಂದ ವಂಚಿತರಾಗಲು ಇದೇ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜ ಮುಖಂಡರು ತಮ್ಮ ಪ್ರತಿಷ್ಠೆ ಬದಿಗೊತ್ತಿ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಭಗವಂತರಾಯ ಪಾಟೀಲ ಮಾತನಾಡಿ, ಸಮಾಜದ ಯುವಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೋರಾಟದ ಕಿಚ್ಚನ್ನು ಮೈಗೂಡಿಸಿಕೊಳ್ಳಬೇಕು. ಸಮಾಜಕ್ಕೆ ಅನ್ಯಾಯವಾದಾಗ ಪ್ರತಿಭಟಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಸಮಾಜ ಗಟ್ಟಿಯಾಗಬೇಕಾದರೆ ಯುವಕರ ಪಾತ್ರ ಮುಖ್ಯ. ಮುಂದಿನ ದಿನಗಳಲ್ಲಿ ಮುಖಂಡರಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಜಿಲ್ಲೆಯಲ್ಲಿ ಬಲಿಷ್ಠ ಹಾಲುಮತ ಸಮಾಜ ಕಟ್ಟಲು ಮುಂದಾಗಬೇಕೆಂದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಶ್ರೀಶೈಲ ದಳವಾಯಿ ಮಾತನಾಡಿ, ಅವಳಿ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಸಮಾಜದ ಅಂಕಿ ಸಂಖ್ಯೆಯಲ್ಲಿ ಸಮಾನವಾಗಿದ್ದರೂ ವಿಜಯಪುರ ಜಿಲ್ಲೆ ರಾಜಕೀಯ ಹಿನ್ನಡೆ ಅನುಭವಿಸುತ್ತಿದೆ. ಜಿಲ್ಲೆಯಲ್ಲಿ ಸಂಘಟನೆಯನ್ನು ಗಟ್ಟಿಗೊಳಿಸಿ ಪಕ್ಷಾತೀತವಾಗಿ ಸಮಾಜದ ಜನರನ್ನು ರಾಜಕೀಯವಾಗಿ ಬೆಳೆಸುವ ಕಾರ್ಯ ಮಾಡಬೇಕೆಂದರು.

ಪ್ರದೇಶ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ರವಿ ಕಿತ್ತೂರ ಮಾತನಾಡಿ, ಜಿಲ್ಲೆಯಲ್ಲಿ ಸಮಾಜ ಸಂಘಟನೆ ಕೊರತೆ ಬಹಳಷ್ಟಿದೆ. ಆ ಸಂಘಟನೆ  ಕೊರತೆ ನೀಗಿಸಿ, ಇಡೀ ಹಾಲುಮತ ಸಮಾಜ ಒಗ್ಗಟ್ಟಾಗಿ ಇತರೇ ಸಮಾಜದ ಪ್ರೀತಿ, ಸಹಕಾರೊಂದಿಗೆ ಮುನ್ನುಗ್ಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಮಖಣಾಪುರ ಗುರುಪೀಠದ ಶ್ರೀ ಸೋಮೇಶ್ವರ ಸ್ವಾಮೀಜಿ ಹಾಗೂ ಹುಲಿಜಂತಿ ಮಾಳಿಂಗರಾಯ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯಲ್ಲಿ ಪ್ರದೇಶ ಕುರುಬರ ಸಂಘದ ಹಿರಿಯ ಉಪಾಧ್ಯಕ್ಷ ಬಸವರಾಜ ಬಸಳಿಗುಂದಿ, ಸಂಘಟನಾ ಕಾರ್ಯದರ್ಶಿ ಹಣಮಂತ ಅಪ್ಪಣ್ಣವರ ಉಪಸ್ಥಿತರಿದ್ದರು.

ಸಮಾಜ ಮುಖಂಡರಾದ ಬಿ.ಡಿ. ಪಾಟೀಲ, ಮಲ್ಲಿಕಾರ್ಜುನ ಮದರಿ, ಕೆಂಚಪ್ಪ ಬಿರಾದಾರ, ಮಲ್ಲಣ್ಣ ಸಾಲಿ, ಜಟ್ಟೆಪ್ಪ ರವಳಿ, ಮಲಕೇಂದ್ರಗೌಡ ಪಾಟೀಲ, ಬಸವರಾಜ ಹೊನವಾಡ, ರಾಜು ಬಿರಾದಾರ, ಸಾಬು ಮಾಶ್ಯಾಳ, ಭೀಮಾಶಂಕರ ಸಾಹುಕಾರ, ಸೋಮನಾಥ ಕಳ್ಳಿಮನಿ, ಪ್ರಭಾವತಿ ನಾಟೀಕಾರ, ಸಂಗಮ್ಮ ದೇವರಳ್ಳಿö, ಜಗದೇವಿ ಗುಂಡಳ್ಳಿö, ಸಂಗಮೇಶ ಓಲೇಕಾರ, ರಾಜು ಕಗ್ಗೋಡ, ರಾಜು ಕಂಬಾಗಿ, ಎಂ.ಜಿ. ಯಕ್ಕುಂಡಿ, ಮೋಹನ ಮೇಟಿ, ಪ್ರಕಾಶ ಜಾಲಗೇರಿ, ಮೋಹನ ದಳವಾಯಿ, ಬೀರಪ್ಪ ಜುಮನಾಳ, ರಾಜಶೇಖರ ಯರನಾಳ, ಧರ್ಮಣ್ಣ ತೋಂಟಾಪುರ, ಮಲ್ಲು ಬಿದರಿ, ಬೀರಪ್ಪ ಸಾಸನೂರ, ಸಿದ್ಧಣ್ಣ ಹೆರಕಲ್, ವಿಕಾಸ ಜೋಗಿ, ಭೀಮನಗೌಡ ಬಿರಾದಾರ, ಶ್ರೀಶೈಲ ಕವಲಗಿ, ಸಿದ್ದು ಬುಳ್ಳಾö, ಗುರಣ್ಣಗೌಡ ಪಾಟೀಲ ಕಾಶೀಬಾಯಿ ವಾಲೀಕಾರ, ರೇವಣಸಿದ್ಧ ಗೊಡಕೆ, ಶ್ರೀಕಾಂತ ಸಂಗೋಗಿ, ಚಂದ್ರಶೇಖರ ಬಗಲಿ, ಹಣಮಂತ ಸಂಖ, ಶಿವಾನಂದ ಹಿರೇಕುರುಬರ, ಮಲ್ಲು ಪರಸಣ್ಣವರ, ಬಸವರಾಜ ಕಾತ್ರಾಳ, ರಾಜು ಬಾಬಾನಗರ, ಬಾಬು ಹಂಚಿನಾಳ, ಸತೀಶ ಅಡವಿ, ರಾಜಶೇಖರ ಸಗಾಯಿ, ಅರವಿಂದ ಡೋಣೂರ, ದುಂಡಪ್ಪ ಹಿರೇಕುರುಬರ, ಎಸ್.ಆರ್. ತಳೇವಾಡ ಮತ್ತಿತರರು ಸಮಾಜ ಸಂಘಟನೆ ಹಾಗೂ ಸಮಾಜ ಅಭಿವೃದ್ಧಿ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎಂ.ಎಸ್. ಕರಡಿ ಹಾಗೂ ರಾಜು ಕುರಿಯವರ ಅವರನ್ನು ಸನ್ಮಾನಿಸಲಾಯಿತು.

ಪ್ರದೇಶ ಕುರುಬರ ಸಂಘದ ನಿರ್ದೇಶಕಿ ರಾಜೇಶ್ವರಿ ಯರನಾಳ ಸ್ವಾಗತಿಸಿದರು. ನಿರ್ದೇಶಕ ಕರೆಪ್ಪ ಬಸ್ತಾಳ ವಂದಿಸಿದರು.

error: Content is protected !!