ನಮ್ಮ ವಿಜಯಪುರ

ಬಸ್‌ನಲ್ಲಿ ಜಗ್ಗಿದಂಗಾತು, ನೋಡಿದರೆ ಚಿನ್ನಾಭರಣವೇ ಕಳುವಾಗಿತ್ತು, ಅಬ್ಬಬ್ಬಾ ಎಷ್ಟಿತ್ತು ಚಿನ್ನ…?

ಸರಕಾರ್‌ ನ್ಯೂಸ್‌ ವಿಜಯಪುರ

ಬಸ್‌ ಇಳಿಯುವಾಗ ಗದ್ದಲ ಮಾಡಿದರು, ತಳ್ಳಾಡಿದರು, ಕೊನೆಗೆ ವ್ಯಾನಿಟಿ ಬ್ಯಾಗ್‌ ಚೆಕ್‌ ಮಾಡಿದರೆ ಅದರಲ್ಲಿದ್ದ ಚಿನ್ನಾಭರಣವೇ ಕಳುವಾಗಿತ್ತು…!

ಇದು ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ನಡೆದ ಘಟನೆ. ಬಸವನಬಾಗೇವಾಡಿಯ ನಂದಿ ಬಡಾವಣೆಯ ಬೌರಮ್ಮ ಸಂತೋಷ ಕತ್ನಳ್ಳಿ ಎಂಬುವವರು ಚಿನ್ನಾಭರಣ ಕಳೆದುಕೊಂಡಿದ್ದು, ಇದೀಗ ಗಾಂಧಿಚೌಕ್‌ ಠಾಣೆಗೆ ದೂರು ನೀಡಿದ್ದಾರೆ.

ಡಿ. 12ರಂದು ಇಂಡಿಯಿಂದ ಬಸ್‌ ಹತ್ತಿದ ಬೌರಮ್ಮ ವಿಜಯಪುರ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದು ಇಳಿಯುವಾಗ ಬಸ್‌ ಹತ್ತುವವರು ತೀವ್ರ ಗದ್ದಲ ಮಾಡಿದ್ದಾರೆ. ತಳ್ಳಾಡಿದ್ದಾರೆ. ನಂತರ ಹಿಂದಿನಿಂದ ಯಾರೋ ಬ್ಯಾಗ್‌ ಜಗ್ಗಿದಂತಾಗಿದೆ. ಕೆಳಗಿಳಿದು ಕೆಲ ಸಮಯದ ಬಳಿಕ ಬ್ಯಾಗ್‌ ಚೆಕ್‌ ಮಾಡಲಾಗಿ ಅದರಲ್ಲಿದ್ದ ಚಿನ್ನಾಭರಣ ಕಳುವಾಗಿರುವುದು ಗಮನಕ್ಕೆ ಬಂದಿದೆ.

ಚಿನ್ನಾಭರಣ ಎಷ್ಟಿತ್ತು ಗೊತ್ತಾ?

ಬೌರಮ್ಮ ತನ್ನ ವ್ಯಾನಿಟಿ ಬ್ಯಾಗ್‌ನಲ್ಲಿ 1.05 ಲಕ್ಷ ರೂ.ಮೌಲ್ಯದ 35 ಗ್ರಾಂ ಚಿನ್ನದ ಸರ, 45 ಸಾವಿರ ರೂ. ಮೌಲ್ಯದ 15 ಗ್ರಾಂ ಚಿನ್ನದ ತಾಳಿ, 15 ಸಾವಿರ ರೂಪಾಯಿ ಮೌಲ್ಯದ 5 ಗ್ರಾಂ ಬಂಗಾರದ ಲಾಕೇಟ್‌, 15 ಸಾವಿರ ರೂಪಾಯಿ ಮೌಲ್ಯದ 5 ಗ್ರಾಮ ಚಿನ್ನದ ಉಂಗುರ ಹಾಗೂ 60 ಸಾವಿರ ರೂಪಾಯಿ ಮೌಲ್ಯದ 20 ಗ್ರಾಂನ 4ಜೊತೆ ಕಿವಿಯೋಲೆ ಸೇರಿ ಒಟ್ಟು 2.40 ಲಕ್ಷ ರೂಪಾಯಿ ಮೌಲ್ಯದ 80 ಗ್ರಾಂ ಚಿನ್ನಾಭರಣ ಕಳುವಾಗಿದೆ. ಇದೀಗ ಅಂದರೆ ಡಿ. 14ರಂದು ಬೌರಮ್ಮ ಗಾಂಧಿ ಚೌಕ್‌ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ಮಾಡಿ)

 

error: Content is protected !!