ಹಿರೇಮಸಳಿ ಶಾಲೆಯ ಗುರುಮಾತೆಗೆ ಜಿಲ್ಲಾ ಅತ್ಯುತ್ತಮ ಸೇವಾ ಸಾಧಕಿ ಪ್ರಶಸ್ತಿಯ ಹಿರಿಮೆ
ಸರಕಾರ ನ್ಯೂಸ್ ಇಂಡಿ
ಪ್ರಾಮಾಣಿಕ ಸೇವೆ ಸಲ್ಲಿಸಿದ ಇಂಡಿ ತಾಲೂಕಿನ ಹಿರೇಮಸಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಬಿ.ಕೆ. ಪಟ್ಟಣಶೆಟ್ಟಿ “ಜಿಲ್ಲಾ ಅತ್ಯುತ್ತಮ ಸೇವಾ ಸಾಧಕಿ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ, ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ವಿಜಯಪುರ ದಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.
ಮಾರ್ಚ್ 8 ರಂದು ಮಹಿಳಾ ದಿನಾಚರಣೆಯ ನಿಮಿತ್ಯ ಕೊಡಮಾಡುವ ಈ ಪ್ರಶಸ್ತಿಗೆ ಭಾಜನರಾಗಿರುವ ಪಟ್ಟಣಶೆಟ್ಟಿ ಅವರನ್ನು ಶಾಲೆಯ ಮುಖ್ಯಗುರು ಆನಂದ ಭೀ ಕೆಂಭಾವಿ ಅಭಿನಂದಿಸಿದ್ದಾರೆ. ಅಲ್ಲದೆ ಆ ಶಾಲೆಯ ಶಿಕ್ಷಕರಾದ ಪೀ ಆರ್ ಪಾಂಡ್ರಿ, ಪ್ರಕಾಶ್ ಹೋಳಿನ್, ಸಂಗಮೇಶ ಬಿ ಸಿ, ಆರ್ ಟಿ ತಳವಾರ,ಸಿ ಎಸ್ ಬೇಡಗೆ, ಹಾಗೂ ಅತಿಥಿ ಶಿಕ್ಷಕರೆಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.