ಕಬ್ಬು ಸಾಗಾಟದ ಟ್ರ್ಯಾಕ್ಟರ್ ಗೆ ಕ್ರೂಸರ್ ಡಿಕ್ಕಿ, ಇಬ್ಬರ ಸಾವು- ಒಂಬತ್ತು ಜನ ಗಾಯ
ಸರಕಾರ್ ನ್ಯೂಸ್ ಝಳಕಿ
ಕಬ್ಬು ಸಾಗಾಟ ಮಾಡುತ್ತಿದ್ದ ಟ್ಯಾಕ್ಟರ್ ಗೆ ಹಿಂಬದಿಯಿಂದ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಸುನೀಗಿದ್ದು, ಒಂಬತ್ತು ಜನ ಗಾಯಗೊಂಡಿದ್ದಾರೆ.
ಇಂಡಿ ತಾಲೂಕಿನ ಧೂಳಖೇಡ್ ಬಳಿಯ ಎನ್ ಎಚ್- 50 ರಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಅಥಣಿ ಮೂಲದ ಭಯ್ಯಾಜಿ ಶಿಂಧೆ (50)
ಸುಮಿತ್ರಾ ಶಿಂಧೆ (45) ಮೃತ ಪತಿ ಹಾಗೂ ಪತ್ನಿ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು
ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ರವಾನಿಸಲಾಗಿದೆ.
ಕ್ರೂಸರ್ ನಲ್ಲಿದ್ದವರು ಮಹಾರಾಷ್ಟ್ರದ ಅಕ್ಕಲಕೋಟ ಬಳಿಯವ ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದರೆನ್ನಲಾಗಿದೆ.
ಸ್ಥಳಕ್ಕೆ ಝಳಕಿ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.