ಕತ್ತಲ ರಾತ್ರಿಯಲ್ಲಿ ಕೈ ಮಾಡಿ ಕರೆದ, ಆಟೋ ಹತ್ತಿ ಯಾಮಾರಿದ, ಮೂವರು ಕಿರಾತಕರಿಂದ ಅಮಾಯಕನ ಸುಲಿಗೆ…..ಆಟೋ ಹತ್ತುವ ಮುನ್ನ ಹುಷಾರ್…..!
ಸರಕಾರ ನ್ಯೂಸ್ ವಿಜಯಪುರ
ಒಂಟಿಯಾಗಿ ಹೋಗುತ್ತಿದ್ದೀರಾ…..ಅದೂ ಕತ್ತಲ ರಾತ್ರಿಯಲ್ಲಿ ಪ್ರಯಾಣಿಸಬೇಕಿದೆಯಾ?……ಹಾಗಿದ್ದರೆ ರಾತ್ರಿ ಆಟೋ ಹತ್ತುವ ಮುನ್ನ ಹುಷಾರ್……!
ಹೌದು, ಕತ್ತಲ ರಾತ್ರಿ ಒಂಟಿಯಾಗಿ ಆಟೋ ಹತ್ತಿದ ವ್ಯಕ್ತಿಯೊಬ್ಬನನ್ನು ಆಟೋದಲ್ಲಿ ಬಂದ ಮೂವರು ಸುಲಿಗೆಗೈದಿರುವ ಭಯಾನಕ ಪ್ರಕರಣವೊಂದು ಬೆಳಕಿಗೆ ಬಂದಿದೆ.
ವಿಜಯಪುರದ ಎಂ.ಬಿ. ಪಾಟೀಲ ಸರ್ಕಲ್‌ನಲ್ಲಿ ರಾತ್ರಿ 10.30ಕ್ಕೆ ಮನೆಗೆ ಹೋಗಲೆಂದು ಆಟೋಗಾಗಿ ಕಾಯುತ್ತಿದ್ದ ರಾಜಶೇಖರ ರತ್ನಾಕರ ಎಂಬುವರು ಸುಲಿಗೆಗೆ ಒಳಗಾಗಿದ್ದಾರೆ. ಮೂಲತಃ ಅಫಜಲ್‌ಪುರ ಟಕ್ಕೆ ಬಳಿಯ ಇಟಗಿ ಕಾಲನಿ ನಿವಾಸಿಯಾಗಿರುವ ರಾಜಶೇಖರ ಆ. 16ರಂದು ರಾತ್ರಿ ಆಟೋಗಾಗಿ ನಿಂತಿರಬೇಕಾದರೆ ಒಂದು ಆಟೋ ಬಂದಿದೆ. ಅದನ್ನು ಕೈ ಮಾಡಿ ನಿಲ್ಲಿಸಲಾಗಿ ಅದರಲ್ಲಿ ಮೂವರು ಜನರಿದ್ರು. ಆಗ ರಾಜಶೇಖರ ತಮಗೆ ವಾಟರ್ ಟ್ಯಾಂಕ್‌ಗೆ ಬಿಡಲು ಹೇಳಿ ಆಟೋ ಹತ್ತಿದ್ದಾರೆ. ಹೀಗೆ ಆಟೋ ಹತ್ತಿಸಿಕೊಂಡ ಅವರು ಇನ್ನೊಬ್ಬನನ್ನು ಕರೆದುಕೊಂಡು ಹೋಗುವುದಿದೆ ಎಂದು ಹೇಳಿ ಆಟೋವನ್ನು 21 ಸೆಂಚ್ಯೂರಿಯವರ ಗೋಡಾವನ್ ಬಳಿಯ ಕಚ್ಚಾ ರಸ್ತೆಯಲ್ಲಿ ತಂದು ನಿಲ್ಲಿಸಿದ್ದಾರೆ.
ಅಲ್ಲಿ ಆಟೋದಿಂದ ರಾಜಶೇಖರನನ್ನು ಕೆಳಗಿಳಿಸಿ ಅವರ ಮೇಲೆ ಹಲ್ಲೆ ನಡೆಸಿ ಬಲಗೈ ಬೆರಳಿಗಿದ್ದ 2 ಬಂಗಾರದ ಉಂಗುರ ಹಾಗೂ ಎಡಗೈಯಲ್ಲಿದ್ದ ರೀಯಲ್ಮಿ ಕಂಪನಿಯ ವಾಸ್ ಹಾಗೂ ಪ್ಯಾಂಟ್ ಕಿಸೆಯಲ್ಲಿದ್ದ 3000 ರೂಪಾಯಿ ತೆಗೆದುಕೊಂಡಿದ್ದಾರೆ. ಮತ್ತೆ ಕೊರಳಲ್ಲಿದ್ದ ಚಿನ್ನದ ಚೈನ್, ಒನ್‌ಪ್ಲಸ್ ಬ್ಲೂಟೂತ್ ತೆಗೆದುಕೊಂಡಿದ್ದಾರೆ. ಮೊಬೈಲ್ ಕಿತ್ತುಕೊಂಡು ಬ್ಯಾಗ್‌ನ್ನು ಕಂಟಿಯಲ್ಲಿ ಒಗೆದು ಆಟೋದಲ್ಲಿ ಜೋರಾಗಿ ರಿಂಗ್ ರೋಡ್ ಕಡೆಗೆ ಹೋಗಿದ್ದಾರೆ. ಒಟ್ಟು 90,500 ರೂಪಾಯಿ ಮೌಲ್ಯದ ಸಾಮಗ್ರಿ ದೋಚಿದ್ದಾರೆ.
ಸುಲಿಗೆಗೆ ಒಳಗಾಗಿರುವ ರಾಜಶೇಖರ ಆದರ್ಶನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)