ನಮ್ಮ ವಿಜಯಪುರ

ವಕ್ಫ ಬೋರ್ಡ್ ನಿಂದ ಲ್ಯಾಂಡ್ ಜಿಹಾದ್ ! ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ, ಮತ್ತೇನು ಹೇಳಿದ್ರು ಶೋಭಕ್ಕ?

ಸರಕಾರ ನ್ಯೂಸ್ ವಿಜಯಪುರ

ರಾಜ್ಯದಲ್ಲಿ ವಕ್ಫ್ ಬೋರ್ಡ್ ನಿಂದ ಲ್ಯಾಂಡ್ ಜಿಹಾದ್ ನಡೆದಿದೆ. ಇದೊಂದು ರೀತಿ ಲ್ಯಾಂಡ್ ಟೆರ್ರರ್ರಿಸಂ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ವಕ್ಫ್ ಆಸ್ತಿ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸಾಥ್ ನೀಡಲು ಆಗಮಿಸಿದ ಶೋಭಾ ಕರಂದ್ಲಾಜೆ ಸೋಮವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ವಕ್ಪ್ ಬೋರ್ಡ್ ಲ್ಯಾಂಡ್ ಭಯೋತ್ಪಾದನೆ ಮಾಡ್ತಿದೆ. ಇದನ್ನು ಬಿಜೆಪಿ ಸಹಿಸಲ್ಲ. ಹೋರಾಟ ಮಾಡುತ್ತೇವೆ. 1974 ವಕ್ಫ್ ನೋಟಿಪಿಕೇಶನ್ ರದ್ದಾಗಬೇಕು. ಅದಕ್ಕಾಗಿ ಹೋರಾಟ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಎಲ್ಲಿ ನೋಡಿದ್ರೂ ವಕ್ಫ್ ವಕ್ಫ್ ಆಗಿ ಬಿಟ್ಟಿದೆ. ಹಿಂದೂ ದೇವಾಲಯಗಳು, ಮಠ ಮಾನ್ಯಗಳು, ರೈತ ಜಮೀನು ಒಂದೂ ಉಳಿದಿಲ್ಲ.
ಉಡುಪಿಯಲ್ಲಿ ಸುಲ್ತಾನಪುರ ಅಂತಾ ಒಂದು ಹಳ್ಳಿಯನ್ನೆ ನಿರ್ಮಾಣ ಮಾಡಿದ್ದಾರೆ. ದಿಶಾಂಕ ಆಪ್
ನಲ್ಲಿ ಹಿಂದೂ ಹಳ್ಳಿ ಸುಲ್ತಾನಪುರ ಎಂದು ಶೋ ಆಗ್ತಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಏನು ಮಾಡಲು ಹೊರಟಿದೆ ಎಂದು ಪ್ರಶ್ನಿಸಿದ ಶೋಭಾ, ಸರ್ಕಾರದ ಕ್ರಮ ಖಂಡಿಸಿ ಹೋರಾಟ ನಡೆಸಲಾಗುವುದು ಎಂದರು.

error: Content is protected !!