ನಮ್ಮ ವಿಜಯಪುರ

ಗುಮ್ಮಟನಗರಿಗೂ ಬ್ರಿಟನ್‌ ಪ್ರಧಾನಿ ಸುನಕ್‌ಗೂ ಎತ್ತಣಿಂದೆತ್ತ ಸಂಬಂಧವಯ್ಯ?

ಸರಕಾರ್‌ ನ್ಯೂಸ್‌ ವಿಜಯಪುರ

ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ಗೂ ಹಾಗೂ ಗುಮ್ಮಟನಗರಿಗೂ ಎತ್ತಣಿಂದೆತ್ತ ಸಂಬಂಧ?

ಹೌದು, ತಲೆಬರಹ ಕಂಡ ಯಾರಿಗಾದರೂ ಇಂಥದ್ದೊಂದು ಆಶ್ಚರ್ಯ ಸೂಚಕ ಪ್ರಶ್ನೆ ಕಾಡದೇ ಇರದು. ಆದರೂ ಇದು ಸತ್ಯ. ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ಗೂ ಗುಮ್ಮಟ ನಗರಿಗೂ ಸಂಬಂಧವಿದೆ. ಅದರಲ್ಲೂ ಕೊರ್ತಿ ಕೊಲ್ಹಾರಿಗೆ ತೀರ ಹತ್ತಿರದ ಸಂಬಂಧವಿದೆ ಎಂದರೆ ನೀವು ನಂಬಲೇಬೇಕು. ರಿಷಿ ಸುನಕ್‌ ಕೊಲ್ಹಾರಕ್ಕೆ ಬರದೇ ಹೋದರೂ ಇಲ್ಲಿ ಅವರ ಕರಳು ಬಳ್ಳಿಗಳು ಪರಸ್ಪರ ಥಳಕು ಹಾಕಿಕೊಂಡಿವೆ. ಅದ್ಹೇಗೆ ಅಂತೀರಾ? ಖ್ಯಾತ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಬಿಚ್ಚಿಟ್ಟ ಸಂಬಂಧಗಳ ಸರಪಳಿ ಇಲ್ಲಿದೆ ನೋಡಿ.

ಹಳೆಯ ಕೊಲ್ಹಾರದ ಲಿಂಬಿಕಾಯಿ ಅವರ ಮನೆ ಎದುರು ಒಂದು ಮನೆ ಕೊರ್ತಿ ಕುಲಕರ್ಣಿಗಳದ್ದು ಅಲ್ಲಿಯ ಎಸ್.ವೈ. ಕುಲಕರ್ಣಿ ಅವರಿಗೆ ಸುಧಾ ಮೂರ್ತಿ ಅವರ ಸೋದರತ್ತೆಯನ್ನು ಕೊಟ್ಟಿತ್ತು. ಅವರ ಹೆಸರು ಲೀಲಾಬಾಯಿ. ಮೊನ್ನೆ ಮೊನ್ನೆ ವರೆಗೂ ಅವರು ಹೊಸಕೊಲ್ಹಾರದಲ್ಲಿ ಪರಪ್ಪ ಗಣಿ ಮನೆಯ ಎದುರಿನ ಸಾಲಿನಲ್ಲಿ ತಮ್ಮದೇ ಆದ ನಿವೇಶನದಲ್ಲಿ ಅವರ ಗಂಡ ಕಟ್ಟಿದ ಮನೆಯಲ್ಲಿ ಇರುತ್ತಿದ್ದರು. ಎಸ್.ವೈ. ಕುಲಕರ್ಣಿ ತಾಯಿ ಮತ್ತು ಡಾ.ಆರ್. ಎಲ್. ರಂಗಣ್ಣ ತಾಯಿ ಅಕ್ಕ ತಂಗಿಯರು. ಇನ್‌ ಫೋಸಿಸನ ಸುಧಾ ಮೂರ್ತಿ ಮಗಳು ಅಕ್ಷತಾ ಬ್ರಿಟನ್‌ ಪ್ರಧಾನಿ ರಿಷಿ ಸುನಕನ ಹೆಂಡತಿ. ಈಗ ಹೇಳಿ ಕೊರ್ತಿ ಕೊಲ್ಹಾರಕ್ಕೂ ಬ್ರಿಟನ್ನಿನ ಪ್ರಧಾನಿ ಆಗುವ ರಿಷಿ ಸುನಕ್ ಗೂ ಎಷ್ಟು ಸಮೀಪದ ಸಂಬಂಧ ಇದೆ ! ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ ಕೃಷ್ಣಾ ಕೊಲ್ಹಾರ  ಕುಲಕರ್ಣಿ. ಮಾತ್ರವಲ್ಲ, ಲಂಡನ್ನಿಗೆ ನಮ್ಮ ಕೆನೆಮೊಸರು ಕಳಿಸ ಬೇಕು ಹೇಗೆ ? ಎಂದು ನಗೆ ಚಟಾಕಿ ಹಾರಿಸುತ್ತಾರೆ.

error: Content is protected !!