ವಿಜಯಪುರ

ಆಕಳುಗಳಿಗೆ ನೆಲ ಹಾಸು ಬೇಕೆ? ಪಶುಪಾಲನೆ ಇಲಾಖೆಗೆ ಕೂಡಲೇ ಸಂಪರ್ಕಿಸಿ….

ಸರಕಾರ ನ್ಯೂಸ್ ವಿಜಯಪುರ

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರು ತಾಲ್ಲೂಕಾ ಆಡಳಿತ ಕಛೇರಿ ವಿಜಯಪುರದಿಂದ 2021-22 ನೇ ಸಾಲಿನಲ್ಲಿ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ರಮದಡಿ ಆಕಳುಗಳಿಗೆ ನೆಲಹಾಸುಗಳ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ವಿಜಯಪುರ ತಾಲ್ಲೂಕಿಗೆ 29 ಸಾಮಾನ್ಯ ವರ್ಗದ, 7 ಪರಿಶಿಷ್ಟ ಜಾತಿಯ, ಹಾಗೂ 01 ಪರಿಶಿಷ್ಟ ಪಂಗಡದ ಒಟ್ಟು 37 ರೈತರಿಗೆ ಗುರಿ ನಿಗದಿಯಾಗಿದೆ.

ಆದ್ದರಿಂದ ಆಸಕ್ತ ಫಲಾನುಭವಿಗಳು ಕಡ್ಡಾಯವಾಗಿ ಎರಡು ಜಾನುವಾರುಗಳನ್ನು ಹೊಂದಿರಬೇಕು. ಫಲಾನುಭವಿಗಳ ಶೇ.50ರ ವಂತಿಗೆ 3095 ರೂ ಮೊತ್ತದೊಂದಿಗೆ ಒಬ್ಬ ಫಲಾನುಭವಿಗೆ ಎರಡು ಆಕಳುಗಳಿಗೆ ನೆಲಹಾಸುಗಳನ್ನು ವಿತರಿಸುವ ಘಟಕಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಫಲಾನುಭವಿಗಳನ್ನು ಆಯಾ ವಿಧಾನಸಭಾ (ವಿಜಯಪುರ, ನಾಗಠಾಣ) ಕ್ಷೇತ್ರಕ್ಕೆ ವಿಂಗಡಿಸಿದ ಗುರಿಗಳನ್ವಯ ಸಂಬಂಧಪಟ್ಟ ಶಾಸಕರ ಅಧ್ಯಕ್ಷತೆಯಲ್ಲಿರುವ ಸಮಿತಿಯಿಂದ ಆಯ್ಕೆ ಮಾಡಲಾಗುವುದು. ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಕೆಗೆ ಈ ಕಛೇರಿಗೆ ಖುದ್ದಾಗಿ ಸಂಪರ್ಕಿಸಬೇಕು.

ಅರ್ಜಿಯನ್ನು ಭರ್ತಿ ಮಾಡಲು ಫಲಾನುಭವಿಯ ಬಳಿ ರಾಸು ಇರುವ ಕುರಿತು ಪಶುವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ, ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ, ಜೂನ್ 24ನೇ ತಾರೀಖಿನೊಳಗೆ ಈ ಕಛೇರಿಗೆ ಸಲ್ಲಿಸುವಂತೆ
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ
ತಾಲ್ಲೂಕಾ ಆಡಳಿತ ಕಛೇರಿ ವಿಜಯಪುರದ ಸಹಾಯಕ ನಿರ್ದೇಶಕ ಡಾ.ಅರಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಡಾ.ಅರಕೇರಿ ಮೊ.9448336141 ಗೆ ಸಂಪರ್ಕಿಸಬಹುದು.

error: Content is protected !!