ರಾಯಣ್ಣ-ಚೆನ್ನಮ್ಮ ಬ್ರಿಗೇಡ್ ರಚನೆ ಸುಳ್ಳು, ಶಾಸಕ ಯತ್ನಾಳ ಹೇಳಿದ್ದೇನು ಗೊತ್ತಾ?
ವಿಜಯಪುರ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹಾಗೂ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪನೆಯಾಗುತ್ತಿದೆ ಎಂಬ ವಿಚಾರವನ್ನು ಯತ್ನಾಳ ಅಲ್ಲಗಳೆದಿದ್ದಾರೆ. ಅಲ್ಲದೇ, ಈಶ್ವರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆಯಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಈಶ್ವರಪ್ಪ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವಂತೆ ನಾವು ಸಭೆ ಮಾಡಿಲ್ಲ. ಆ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಶನಿವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಈಶ್ವರಪ್ಪ ಬಿಜೆಪಿಯಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದವರು. ಅವರು ಯಾವುದೇ ಗದ್ದಲ ಮತ್ತು ಹರಾಮ್‌ಕೋರ್ ಕೆಲಸ ಮಾಡಿಲ್ಲ. ಪ್ರಧಾನಿಯವರು ಕರೆ ಮಾಡಿ ಹೇಳಿದ ಕಾರಣ ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಬಿಟ್ಟುಕೊಟ್ಟರು. ಅವರಿಗೆ ತಮ್ಮದೇ ಆದ ಮೌಲ್ಯಗಳಿವೆ. ಅವರು ಮತ್ತು ನಾವು ಭೇಟಿಯಾಗಿದ್ದು ನಿಜ. ಅವರು ಬಿಜೆಪಿಗೆ ಬರಬೇಕು ಎಂದು ಬಯಸುತ್ತೇವೆ. ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದರು. ರಾಯಣ್ಣ-ಚೆನ್ನಮ್ಮ ಬ್ರಿಗೇಡ್ ಸ್ಥಾಪನೆ ವಿಚಾರ ಸುಳ್ಳು. ಆದರೆ, ಆಯಾ ಸಮುದಾಯಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದರೆ ನಾವು ಹೋಗುತ್ತೇವೆ. ಇಲ್ಲಿ ರಾಜಕೀಯ ಸಂಬಂಧವಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅಹಿಂದ ಹೋರಾಟ ಮಾಡಿದಾಗಲೂ ನಾವು ಹೋಗಿದ್ದೆವು ಎಂದು ತಿಳಿಸಿದ್ದಾರೆ.