ರಾಜ್ಯ

ಗಣಪತಿ ಮೂರ್ತಿಗೆ ಕಲ್ಲು ತೂರಿದ ಕಿಡಿಗೇಡಿಗಳು

ವಿಜಯಪುರ: ಗಣಪತಿ ಮೂರ್ತಿಗೆ ಕಲ್ಲು ಎಸೆದು ವಿಕೃತಿ ಮೆರೆದ ಘಟನೆ ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಗಣಪತಿ ವೃತ್ತದಲ್ಲಿ ನಡೆದಿದೆ. ಗಣಪತಿ ಚೌಕ್ ನತ್ತ ಕಲ್ಲು ಎಸೆಯಲಾಗಿದ್ದು, ಮೂರ್ತಿ ಹಾನಿಯಾಗಿದೆ. ವೃತ್ತದ ಗಾಜು ಒಡೆದಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ಇದ್ದು, ಸ್ಥಳದಲ್ಲಿ ಹಿಂದುಪರ ಸಂಘಟನೆ ಪದಾಧಿಕಾರಿಗಳು ಜಮಾಯಿಸಿದ್ದಾರೆ. ಗಾಂಧಿಚೌಕ್ ಪೊಲೀಸರು ಸ್ಥಳಕ್ಕೆ ದೌಢಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಇದೆ.

error: Content is protected !!