ಚಿರತೆ ಹಾವಳಿಯಿಂದ ಬೆಚ್ಚಿ ಬಿದ್ದ ಜನ, ಅರಣ್ಯಾಧಿಕಾರಿಗಳು ಹೇಳಿದ್ದೇನು?
ವಿಜಯಪುರ: ಭೀಮಾತೀರದಲ್ಲಿ ಚಿರತೆ ಹಾವಳಿ ಜೋರಾಗಿದ್ದು ಜನ ತೀವ್ರ ಆತಂಕಗೊಂಡಿದ್ದಾರೆ !
ಆರಂಭದಲ್ಲಿ ಮುದ್ದೇಬಿಹಾಳ ಭಾಗದಲ್ಲಿ ಆತಂಕ ಸೃಷ್ಠಿಸಿದ್ದ ಚಿರತೆ ಹಾವಳಿ ಇದೀಗ ಇಂಡಿ, ಸಿಂದಗಿ ಭಾಗಕ್ಕೂ ಹಬ್ಬಿದೆ. ಈ ಮಧ್ಯೆ ಕೆಲವು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಿಂದ ಜನ ಮತ್ತಷ್ಟು ಗಾಬರಿಗೊಂಡಿದ್ದಾರೆ. ಆದರೆ, ಆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಹಳೆಯದಾಗಿದ್ದು, ನೆರೆಯ ಮಾರಾಷ್ಟ್ರದಲ್ಲಿ ಕಂಡು ಬಂದಿರುವಂಥದ್ದು ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಸಮೃದ್ಧ ಮಳೆಯಿಂದಾಗಿ ಈ ಬಾರಿ ಕಬ್ಬು ಬೆಳೆ ಆಳೆತ್ತರವಾಗಿ ಬೆಳೆದು ನಿಂತಿದ್ದು, ಕಾಡು ಪ್ರಾಣಿಗಳ ಉಪಟಳ ಕಾಣಿಸಿಕೊಂಡಿದೆ. ಆದರೆ, ಆ ಕಾಡು ಪ್ರಾಣಿಯ ಚಿರತೆ ಆಗಿರಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಮುದ್ದೇಬಿಹಾಳದಲ್ಲಿ ಕಂಡು ಬಂದದ್ದು ಚಿರತೆ ಅಲ್ಲ. ಅದೊಂದು ಬೆಕ್ಕಿನ ಜಾತಿಯ ಪ್ರಾಣಿಯಾಗಿತ್ತು. ಇದೀಗ ಸಿಂದಗಿಯಲ್ಲೂ ಈ ಹೆಜ್ಜೆ ಗುರುತು ಕಂಡು ಬಂದಿವೆ. ಚಿರತೆಯದ್ದೆಂಬುದು ಖಚಿತ ಪಟ್ಟಿಲ್ಲ. ಸಿಂದಗಿ ಮತ್ತು ಇಂಡಿ ಭಾಗದಲ್ಲಿ ಈಗಾಗಲೇ ಬೋನು (ಪಂಜರ) ಇರಿಸಲಾಗಿದೆ. ಹೀಗಾಗಿ ಯಾವುದಕ್ಕೂ ಜನ ಆತಂಕ ಪಡುವ ಅಗತ್ಯ ಇಲ್ಲ. ಆದರೂ ಸಾರ್ವಜನಿಕರು ಏಕಾಂಗಿಯಾಗಿ ಓಡಾಡದೇ ಗುಂಪು-ಗುಂಪಾಗಿ ಸಂಚರಿಸುವುದು ಒಳಿತು. ರಾತ್ರಿ ಒಬ್ಬೊಂಟಿಯಾಗಿ ಹೋಗದಂತೆ ಅರಣ್ಯಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯಾಧಿಕಾರಿ ಶಿವಶರಣಯ್ಯ ಅವರು, ಕಬ್ಬು ಬೆಳೆಯ ವಿಸ್ತೀರ್ಣ ಹೆಚ್ಚಾಗಿದೆ. ಹೀಗಾಗಿ ಜನರಿಗೆ ಯಾವ ಪ್ರಾಣಿ ಕಂಡಿದೆ ಎಂಬುದು ಗೊತ್ತಿಲ್ಲ. ಜನ ಕೆಲವು ಬೆಕ್ಕು ಮತ್ತು ನಾಯಿ ಜಾತಿಯ ಕಾಡು ಪ್ರಾಣಿ ಕಂಡು ಚಿರತೆ ಎಂದು ಭಾವಿಸಿರುವ ಸಾಧ್ಯತೆಯೂ ಇದೆ. ಈವರೆಗೆ ಚಿರತೆ ಹೆಜ್ಜೆಯೂ ಕಾಣಿಸಿಲ್ಲ. ಕಬ್ಬು ದಟ್ಟವಾಗಿರುವ ಕಾರಣ ಅಷ್ಟು ಸುಲಭವಾಗಿ ಪ್ರಾಣಿಗಳು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಅಲ್ಲಲ್ಲಿ ಬೋನು ಇರಿಸಲಾಗಿದೆ. ಆತಂಕ ಬೇಡ ಎಂದಿದ್ದಾರೆ. ಚಿರತೆ ಹಾವಳಿಯಿಂದ ಬೆಚ್ಚಿ ಬಿದ್ದ ಜನ, ಅರಣ್ಯಾಧಿಕಾರಿಗಳು ಹೇಳಿದ್ದೇನು?
ವಿಜಯಪುರ: ಭೀಮಾತೀರದಲ್ಲಿ ಚಿರತೆ ಹಾವಳಿ ಜೋರಾಗಿದ್ದು ಜನ ತೀವ್ರ ಆತಂಕಗೊಂಡಿದ್ದಾರೆ !
ಆರಂಭದಲ್ಲಿ ಮುದ್ದೇಬಿಹಾಳ ಭಾಗದಲ್ಲಿ ಆತಂಕ ಸೃಷ್ಠಿಸಿದ್ದ ಚಿರತೆ ಹಾವಳಿ ಇದೀಗ ಇಂಡಿ, ಸಿಂದಗಿ ಭಾಗಕ್ಕೂ ಹಬ್ಬಿದೆ. ಈ ಮಧ್ಯೆ ಕೆಲವು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಿಂದ ಜನ ಮತ್ತಷ್ಟು ಗಾಬರಿಗೊಂಡಿದ್ದಾರೆ. ಆದರೆ, ಆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಹಳೆಯದಾಗಿದ್ದು, ನೆರೆಯ ಮಾರಾಷ್ಟ್ರದಲ್ಲಿ ಕಂಡು ಬಂದಿರುವಂಥದ್ದು ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಸಮೃದ್ಧ ಮಳೆಯಿಂದಾಗಿ ಈ ಬಾರಿ ಕಬ್ಬು ಬೆಳೆ ಆಳೆತ್ತರವಾಗಿ ಬೆಳೆದು ನಿಂತಿದ್ದು, ಕಾಡು ಪ್ರಾಣಿಗಳ ಉಪಟಳ ಕಾಣಿಸಿಕೊಂಡಿದೆ. ಆದರೆ, ಆ ಕಾಡು ಪ್ರಾಣಿಯ ಚಿರತೆ ಆಗಿರಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಮುದ್ದೇಬಿಹಾಳದಲ್ಲಿ ಕಂಡು ಬಂದದ್ದು ಚಿರತೆ ಅಲ್ಲ. ಅದೊಂದು ಬೆಕ್ಕಿನ ಜಾತಿಯ ಪ್ರಾಣಿಯಾಗಿತ್ತು. ಇದೀಗ ಸಿಂದಗಿಯಲ್ಲೂ ಈ ಹೆಜ್ಜೆ ಗುರುತು ಕಂಡು ಬಂದಿವೆ. ಚಿರತೆಯದ್ದೆಂಬುದು ಖಚಿತ ಪಟ್ಟಿಲ್ಲ. ಸಿಂದಗಿ ಮತ್ತು ಇಂಡಿ ಭಾಗದಲ್ಲಿ ಈಗಾಗಲೇ ಬೋನು (ಪಂಜರ) ಇರಿಸಲಾಗಿದೆ. ಹೀಗಾಗಿ ಯಾವುದಕ್ಕೂ ಜನ ಆತಂಕ ಪಡುವ ಅಗತ್ಯ ಇಲ್ಲ. ಆದರೂ ಸಾರ್ವಜನಿಕರು ಏಕಾಂಗಿಯಾಗಿ ಓಡಾಡದೇ ಗುಂಪು-ಗುಂಪಾಗಿ ಸಂಚರಿಸುವುದು ಒಳಿತು. ರಾತ್ರಿ ಒಬ್ಬೊಂಟಿಯಾಗಿ ಹೋಗದಂತೆ ಅರಣ್ಯಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯಾಧಿಕಾರಿ ಶಿವಶರಣಯ್ಯ ಅವರು, ಕಬ್ಬು ಬೆಳೆಯ ವಿಸ್ತೀರ್ಣ ಹೆಚ್ಚಾಗಿದೆ. ಹೀಗಾಗಿ ಜನರಿಗೆ ಯಾವ ಪ್ರಾಣಿ ಕಂಡಿದೆ ಎಂಬುದು ಗೊತ್ತಿಲ್ಲ. ಜನ ಕೆಲವು ಬೆಕ್ಕು ಮತ್ತು ನಾಯಿ ಜಾತಿಯ ಕಾಡು ಪ್ರಾಣಿ ಕಂಡು ಚಿರತೆ ಎಂದು ಭಾವಿಸಿರುವ ಸಾಧ್ಯತೆಯೂ ಇದೆ. ಈವರೆಗೆ ಚಿರತೆ ಹೆಜ್ಜೆಯೂ ಕಾಣಿಸಿಲ್ಲ. ಕಬ್ಬು ದಟ್ಟವಾಗಿರುವ ಕಾರಣ ಅಷ್ಟು ಸುಲಭವಾಗಿ ಪ್ರಾಣಿಗಳು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಅಲ್ಲಲ್ಲಿ ಬೋನು ಇರಿಸಲಾಗಿದೆ. ಆತಂಕ ಬೇಡ ಎಂದಿದ್ದಾರೆ.