“ಮಹಾ” ಉದ್ಯಮಿ ಸುಲಿಗೆ ! ಮಾಲ್ ಸಮೇತ ಆರೋಪಿಗಳ ಬಂಧನ
ವಿಜಯಪುರ: ಕೊಲ್ಹಾಪುರ ಉದ್ಯಮಿಯ ಸುಲಿಗೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಉದ್ಯಮಿ ಅಶೋಕ ಪ್ರಭಾಕರ ಕುಲಕರ್ಣಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ, ಚಾಕು ತೊರಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನ, ನಗದು ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡು ರಾಕೇಶ ಮಹಾಂತೇಶ ಸಾವಂತ 24, ರೋಹನ ಸುನೀಲ ಯೇಡಕರ 24, ಪ್ರಥಮೇಶ ಬಾಬಾಸಾಹೇಬ ಹವಾಲ್ದಾರ 22 ಬಂಧಿತ ಆರೋಪಿಗಳು. ಅಲ್ಲದೇ, ಬಂಧಿತರಿಂದ 16 ಗ್ರಾಮ್ ತೂಕದ ಚಿನ್ನದ ಸರ, 6 ಗ್ರಾಮ್ ತೂಕದ ಚಿನ್ನದ ಉಂಗುರ, 770 ನಗದು, ಪಲ್ಸರ್ ಕಂಪನಿಯ ನಂಬರ್ ಇಲ್ಲದ ಬೈಕ್, ಮೊಬೈಲ್, ಎರಡು ಚಾಕು ಸೇರಿದಂತೆ 1,70,770 ವಸ್ತುಗಳನ್ನು ಜಪ್ತಿಗೈದಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.