ರಾಜ್ಯ

ನಟ ದರ್ಶನ್ ಆಪ್ತ್ ವಿನಯ್ ದರ್ಗಾ ಜೈಲ್‌ಗೆ ಶಿಫ್ಟ್ !

ವಿಜಯಪುರ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆಪ್ತ್ ವಿನಯ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ದರ್ಗಾ ಜೈಲ್‌ಗೆ ಶಿಫ್ಟ್ ಮಾಡಲಾಗಿದೆ. ಆದಿಲ್ ಶಾಹಿ ಸುಲ್ತಾನರ ಕಾಲದ ಐತಿಹಾಸಿಕ ಸ್ಮಾರಕದಲ್ಲಿರುವ ದರ್ಗಾ ಜೈಲ್‌ನಲ್ಲಿ ಶನಿವಾರ ವಿನಯ್‌ನನ್ನು ಬಂಧಿಸಿಡಲಾಗಿದೆ. ಕೆಎ-01, ಜಿ-6892 ನಂಬರ್‌ನ ಪೊಲೀಸ್ ವಾಹನದಲ್ಲಿ ಬಿಗಿ ಭದ್ರತೆಯೊಂದಿಗೆ ವಿನಯ್‌ನನ್ನು ಕರೆ ತರಲಾಯಿತು. ಎರಡು ಬ್ಯಾಗ್ ಗಳೊಂದಿಗೆ ಆಗಮಿಸಿದ ಆರೋಪಿ ವಿನಯ್‌ಗೆ 14433 ಕೈದಿ ನಂಬರ್ ನೀಡಿದ ಅಧಿಕಾರಿಗಳು 1 ನಂಬರ್ ಸೆಲ್‌ನಲ್ಲಿ ಆತನನ್ನು ಇರಿಸಿದರು. ಬೆಂಗಳೂರಿನ ಸ್ಟೋನಿ ಬ್ರೂಕ್ ಹೊಟೇಲ್ ಮಾಲೀಕನಾಗಿರುವ ವಿನಯ್ ದರ್ಶನ ಆಪ್ತರಲ್ಲೊಬ್ಬ. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಈತ 10ನೇ ಆರೋಪಿ. ಕಳೆದ ನಾಲ್ಕೈದು ದಿನಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಚೇರ್ ಹಾಕಿಕೊಂಡು, ಸಿಗರೇಟ್ ಸೇದುತ್ತ, ಫಂಟ್ ಹೊಡೆಯುತ್ತಿದ್ದ ಫೋಟೊ ವೈರಲ್ ಆಗಿತ್ತು. ಹೀಗಾಗಿ ಆರೋಪಿಗಳನ್ನು ರಾಜ್ಯದ ವಿವಿಧ ಜೈಲ್‌ಗಳಿಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ವಿನಯ್‌ನನ್ನು ವಿಜಯಪುರ ಜೈಲ್‌ಗೆ ಸೇರ್ಪಡೆಗೊಳಿಸಲಾಯಿತು.
ಸೆಲ್ ನಂಬರ್ ಒನ್‌ನಲ್ಲಿ ಅಟ್ಯಾಚ್ಡ್ ಬಾತ್ ರೂಮ್ ಹಾಗೂ ಫ್ಯಾನ್ ಸೌಲಭ್ಯ ನೀಡಲಾಗಿದ್ದು, ವಾರದಲ್ಲಿ ಒಂದು ಬಾರಿ ಕುಟುಂಬಸ್ಥರು ಮತ್ತು ಅವರ ಪರವಾದ ನ್ಯಾಯವಾದಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾರಾಗೃಹದ ಅಧೀಕ್ಷಕ ಡಾ.ಐ.ಜೆ. ಮ್ಯಾಗೇರಿ ತಿಳಿಸಿದರು.

error: Content is protected !!