ರಾಜ್ಯ

ನೂರಕ್ಕೆ ‌ನೂರು ಸಿಎಂ ರಾಜೀನಾಮೆ ಇಲ್ಲ ಸಚಿವ ಜಮೀರ್ ಅಹ್ಮದ್ ಪ್ರಶ್ನೆ

ವಿಜಯಪುರ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಪರ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ರಾಜೀನಾಮೆ ಇಲ್ಲ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿದರು. ವಿಜಯ ದಶಮಿ ಬಳಿಕ ಸಿಎಂ ರಾಜೀನಾಮೆ ನೀಡುರೆಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೂ ಇಸ್ ವಿಜಯೇಂದ್ರ ಎಂದು ಇಂಗ್ಲಿಷ್ ನಲ್ಲಿ ಪ್ರಶ್ನಿಸಿದರು. ವಿಜಯೇಂದ್ರ ಕಾಂಗ್ರೆಸ್ ಹೈಕಮಾಂಡಾ? ಅವರು ಹೇಳಿದ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾ? ನಮ್ಮ ಪಕ್ಷದ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸೋನಿಯಾಗಾಂಧಿ ಅವರು ರಾಜೀನಾಮೆ ಕೊಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಸತೀಶ ಜಾರಕಿಹೊಳಿ ಕಾರ್ಯಕ್ರಮವೊಂದರಲ್ಲಿ ಮುಂದಿನ ಸಿಎಂ ಸತೀಶ ಜಾರಕಿಹೊಳಿ ಎಂಬ ಕೂಗು ಕೇಳಿ ಬಂದ ಬಗ್ಗೆ ಪ್ರತಿ ಕ್ರಿಯಿಸುತ್ತಾ, ಅಭಿಮಾನಿಗಳು ಕೂಗುತ್ತಾರೆ. ಹಾಗಂತ ಸಿಎಂ ಆಗಿ ಬಿಡುತ್ತಾರಾ? ನನ್ನ ಅಭಿಮಾನಿಗಳು ಕೂಗುತ್ತಾರೆ. ನಾನು ಸಿಎಂ ಆಗುತ್ತೇನಾ? ಎಂದರು.

error: Content is protected !!