ಬಾಗಲಕೋಟ

ಲಿ.ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ಕೂಡಲ ಸಂಗಮದಲ್ಲಿ ವಿಸರ್ಜನೆ, ಹೇಗಿತ್ತು ಗೊತ್ತಾ ಪ್ರಕ್ರಿಯೆ?

ಸರಕಾರ್‌ ನ್ಯೂಸ್‌ ಬಾಗಲಕೋಟೆ

ನಡೆದಾಡುವ ದೇವರು ಖ್ಯಾತಿಯ ಪರಮ ಪೂಜ್ಯ ಲಿಂ. ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮವನ್ನು ಭಾನುವಾರ ನಸುಕಿನ ಜಾವ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆಗೊಳಿಸಲಾಯಿತು.

ನಸುಕಿನ 5ಗಂಟೆಗೆ ವಿಜಯಪುರ ಜ್ಞಾನ ಯೋಗಾಶ್ರಮದಿಂದ ಚಿತಾಭಸ್ಮದೊಂದಿಗೆ ಹೊರಟ ಮಠಾಧೀಶರು, ಭಕ್ತರು ತುಂಬಿದ ವಾಹನಗಳು ಬೆಳಗ್ಗೆ ಕೂಡಲ ಸಂಗಮ ತಲುಪಿದವು. ಮೊದಲೇ ಕೂಡಲೇ ಸಂಗಮದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಲವು ಪೂಜ್ಯರು ನದಿ ದಂಡೆಯಲ್ಲಿ ವಿಶೇಷ ತಯಾರಿ ಮಾಡಿಕೊಂಡಿದ್ದರು.

ಜ್ಞಾನಯೋಗಾಶ್ರಮದ ಪೂಜ್ಯ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪ್ರಮುಖ ಮಠಾಧೀಶರು ಬೋಟ್‌ ಮೂಲಕ ತ್ರಿವೇಣಿ ಸಂಘಮದತ್ತ ತೆರಳಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿ ಭಕ್ತಿ ಭಾವದಿಂದ ಕೈ ಮುಗಿದರು. ಆ ಮೂಲಕ ಪೂಜ್ಯ ಸಿದ್ಧೇಶ್ವರ ಶ್ರೀಗಳ ಆಶಯ ಈಡೇರಿಸಲಾಯಿತು. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಸಂಗಮದಲ್ಲಿ ಪೂಜ್ಯರು ಲೀನವಾದರು. ಬಳಿಕ ಗೋಕರ್ಣದತ್ತ ಮಠಾಧೀಶರು ಪ್ರಯಾಣ ಬೆಳೆಸಿದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರ್ಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!