ಫ್ಲಿಪ್‌ಕಾರ್ಟ್‌ನ ಲ್ಲಿ ಜಾಬ್ ಕೊಡಿಸುವುದಾಗಿ ಮೋಸ, ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ನಿರುದ್ಯೋಗಿ !
ಸರಕಾರ್ ನ್ಯೂಸ್ ಬಾಗಲಕೋಟೆ
ಫ್ಲಿಪ್‌ಕಾರ್ಟ್‌ನ ಲ್ಲಿ ಉದ್ಯೋಗ ಸಿಗುವ ಮಹದಾಸೆಯಿಂದ ನಿರುದ್ಯೋಗ ಯುವಕನೋರ್ವ ಒಂದು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಜಮಖಂಡಿಯ ಎಲ್‌ಐಸಿ ಕಾಲನಿಯ ನಿವಾಸಿ ಪ್ರಜ್ವಲ ಗೋವಿಂದಪ್ಪ ಗಡದನ್ನವರ (21) ಮೋಸಕ್ಕೆ ಒಳಗಾದ ಯುವಕ. ಕಳೆದ ಅ. 10 ರಿಂದ ನವೆಂಬರ್ 1ರವರೆಗೆ ಪ್ರಜ್ವಲ ಹಂತ ಹಂತವಾಗಿ 1,44,798 ರೂಪಾಯಿ ಕಳೆದುಕೊಂಡಿದ್ದಾನೆ.
ಘಟನೆ ಸ್ವಾರಸ್ಯ:
ಅಪರಿಚಿತ ವ್ಯಕ್ತಿಯೋರ್ವ ಪ್ಲಿಪ್‌ಕಾರ್ಟ್ ಕಂಪನಿ ಹೆಸರು ಬಳಸಿಕೊಂಡು ಪ್ರಿಪ್‌ಕಾರ್ಟ್‌ನಲ್ಲಿ ಜಾಬ್‌ಮಾಡಿದರೆ ನಿಮಗೆ ಕಮಿಷನ್‌ನೀಡುವುದಾಗಿ ಪ್ರಜ್ವಲ್‌ಗೆ ನಂಬಿಸಿದ್ದಾನೆ. ಇದನ್ನು ನಂಬಿ ಪ್ರಜ್ವಲ್ ತನ್ನ ಬ್ಯಾಂಕ್ ಖಾತೆಯಿಂದ ಅನಾಮದೇಯ ವ್ಯಕ್ತಿಯ ಖಾತೆಗೆ ಹಂತ ಹಂತವಾಗಿ ಒಟ್ಟು 1,44,898 ರೂಪಾಯಿ ಸಂದಾಯ ಮಾಡಿದ್ದಾನೆ. ಬಳಿಕ 100 ರೂಪಾಯಿ ಪ್ರಜ್ವಲ್ ಖಾತೆಗೆ ಜಮಾ ಮಾಡಿದ್ದಾನೆ. ಇನ್ನುಳಿದ ಹಣ ಮರಳಿ ನೀಡದೇ ಮೋಸ ಮಾಡಿದ್ದಾನೆ. ಈ ಬಗ್ಗೆ ಪ್ರಜ್ವಲ್ ನ. 16ರಂದು ಬಾಗಲಕೋಟೆ ಸಿಇನ್ ಠಾಣೆಗೆ ದೂರು ನೀಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್‌ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)