ಸುಕನ್ಯಾ ಸಮೃದ್ಧಿ ಹಣ ದುರುಪಯೋಗ, ಅಂಚೆ ಪಾಲಕನ ಮೇಲೆ ಪ್ರಕರಣ ದಾಖಲು
ಸರಕಾರ ನ್ಯೂಸ್ ಬೀಳಗಿ
ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಗೆ ಹಣ ಜಮಾ ಮಾಡುತ್ತೇನೆಂದು ನಂಬಿಸಿ ಫಲಾನುಭವಿಗಳು ಕೊಟ್ಟಿರುವ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೀಳಗಿ ತಾಲೂಕಿನ ತೋಳಮಟ್ಟಿಯ ಶಾಖಾ ಅಂಚೆ ಪಾಲಕ ಹನಮಂತ ಬಾಲದಂಡಪ್ಪ ಅಂಬಿಗೇರ ಇಂಥದ್ದೊಂದು ಕೃತ್ಯ ನಡೆಸಿದ್ದು, ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ತೋಳಮಟ್ಟಿ ಗ್ರಾಮದ ಮಹಾದೇವಿ ರಂಗಪ್ಪಾ ಅಕ್ಕೋಜಿ, ಕಲಾವಿತಿ ಮಲ್ಲಪ್ಪ ಬಾವಿ, ಗೀತವ್ವ ಮಲ್ಲಪ್ಪ ಬಾವಿ ಹಾಗೂ ಸಂಕವ್ವ ಅಪ್ಪಣ್ಣ ಬೋವಿ ಎಂಬುವರ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. 2016ನೇ ಸಾಲಿನಿಂದ 2019ರವರೆಗೆ ಒಟ್ಟು 14265 ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಾನೆ.
ಫಲಾನುಭವಿಗಳಿಂದ ಹಣ ಪಡೆದು, ಕಚೇರಿಯ ಮೊಹದು ಹಾಕಿ, ಚಿಕ್ಕ ಸಹಿ ಮಾಡಿ ಪಾಸ್‌ಬುಕ್‌ಗಳನ್ನು ಮರಳಿ ನೀಡಿದ್ದು ಅದರಲ್ಲಿ ಹಣ ಮಾತ್ರ ಜಮಾ ಆಗಿಲ್ಲ. ಈ ಬಗ್ಗೆ ಈತನ ಮೇಲೆ ಬೀಳಗಿ ಠಾಣೆಯಲ್ಲಿ ಮೋಸ ಹಾಗೂ ವಂಚನೆಯ ಪ್ರಕರಣ ದಾಖಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)