ದಕ್ಷಿಣ ಕನ್ನಡ

ಇನ್‌ಸ್ಟಾಗ್ರಾಂನಲ್ಲಿ ಪರಿಚಯ, ವಾಟ್ಸಪ್‌ನಲ್ಲಿ ಸ್ನೇಹ, ಯುಕೆ ಅಪರಿಚಿತನಿಗೆ ಮೋಸ ಹೋದ ಶಿಕ್ಷಕಿ, ಬರೋಬ್ಬರಿ 6.52 ಲಕ್ಷ ರೂಪಾಯಿ ಖೋತಾ….ವೆರಿ ಇಂಟ್ರೆಸ್ಟಿಂಗ್‌ ಕೇಸ್‌

ಸರಕಾರ ನ್ಯೂಸ್‌ ದಕ್ಷಿಣ ಕನ್ನಡ

ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಯುಕೆ ಸ್ನೇಹಿತನಿಂದ ಶಿಕ್ಷಕಿಯೊಬ್ಬರು ಮೋಸ ಹೋದ ಪ್ರಕರಣ ಬೆಳಕಿಗೆ ಬಂದಿದ್ದು, ಬರೋಬ್ಬರಿ 6.52 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ !

ಹೌದು, ಉಜಿರೆಯ ಎಸ್‌ಡಿ ಎಂ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಸ್ಮಿತಾ ಕಿನಿ ಎಂಬುವರು ಮೋಸಕ್ಕೆ ಒಳಗಾಗಿದ್ದಾರೆ. 2022 ಡಿ. 1ರಂದು ಸುಪ್ರಿಯಾ ಎಸ್‌ ಎಂಬ ಇನ್‌ ಸ್ಟಾಗ್ರಾಮ್‌ ಅಕೌಂಟ್‌ಗೆ ಸೆಂಗ್ಯೂನ್ಯೂ ಎಂಬ ಅಕೌಂಟ್‌ನಿಂದ ಫ್ರೆಂಡ್‌ ರಿಕ್ವೆಸ್ಟ್‌ ಬಂದಿದೆ. ಅದನ್ನು ಎಕ್ಸೆಪ್ಟ್‌ ಮಾಡಿದ್ದು, ಆ ಅಪರಿಚಿತ ವ್ಯಕ್ತಿಯಿಂದ ಬಂದ ಮೊಬೈಲ್‌ ಸಂಖ್ಯೆಗೆ ಶಿಕ್ಷಕಿ ವಾಟ್ಸಪ್‌ ಮೆಸೇಜ್‌ ಮಾಡಿದ್ದಾಳೆ. ಬಳಿಕ ಪರಸ್ಪರ ಮಾತನಾಡಿಕೊಂಡಿದ್ದು ಆ ಅಪರಿಚಿತ ವ್ಯಕ್ತಿ ಯುಕೆಯಲ್ಲಿರುವುದಾಗಿ ತಿಳಿಸಿದ್ದಾನೆ. ನಂತರ ಪರಸ್ಪರ ವಾಟ್ಸಪ್‌ ಮುಖಾಂತರ ಸಂಪರ್ಕದಲ್ಲಿದ್ದು ಸ್ನೇಹಿತರಾಗಿದ್ದಾರೆ.

ಇಂಡಿಯಾಕ್ಕೆ ಆಗಮನ:

2022 ಡಿ. 14ರಂದು ಆ ಅಪರಿಚಿತ ವ್ಯಕ್ತಿ ಮೆಸೇಜ್‌ ಮಾಡಿ ತಾನು ಯುಕೆಯಿಂದ ಇಂಡಿಯಾಕ್ಕೆ ಬರುವುದಾಗಿ ಹೇಳಿದ್ದಾನೆ. ನಂತರ ಡಿ. 16ರಂದು ದೆಹಲಿ ಏರ್‌ಪೋರ್ಟ್‌ನಿಂದ ಆ ವ್ಯಕ್ತಿಯ ನಂಬರ್‌ನಿಂದ ಮಹಿಳೆಯೊಬ್ಬರು ಕರೆ ಮಾಡಿ ಸೆಂಗ್ಯೂನ್ಯೂ ಎಂಬ ವ್ಯಕ್ತಿ ಏರ್ ಪೋರ್ಟ್‌ಗೆ ಬಂದಿದ್ದು ಅವರ ಡಾಕ್ಯುಮೆಂಟ್‌ ಸಮಸ್ಯೆ ಇರುವುದರಿಂದ ದಂಡ ಕಟ್ಟಬೇಕೆಂದು ತಿಳಿಸಿದ್ದಾರೆ. ನಂತರ ಅದೇ ಮೊಬೈಲ್‌ ನಂಬರ್‌ನಲ್ಲಿ ಸೆಂಗ್ಯೂನ್ಯೂ ಮಾತನಾಡಿ 24,500 ರೂಪಾಯಿ ಕಟ್ಟಲು ಹೇಳಿದ್ದಾನೆ. ತನ್ನ ಬಳಿ ಯುಕೆ ಮನಿ ಇರುವುದರಿಂದ ಟ್ರಾನ್ಸಫರ್‌ ಮಾಡಲು ತೊಂದರೆಯಾಗಿದ್ದು, ಹಣವಿದ್ದರೆ ನೀಡುವಂತೆ ತಿಳಿಸಿದ್ದಕ್ಕೆ ಶಿಕ್ಷಕಿ 21500 ರೂಪಾಯಿ ಕಳುಹಿಸಿದ್ದಾರೆ. ನಂತರ ಮತ್ತೆ ಕರೆ ಮಾಡಿ ಅಕಾಮ್ಡೇಶನ್‌ , ಬಯೋಮೆಟ್ರಿಕ್‌ ಹಾಗೂ ವಿವಿಧ ಚಾರ್ಜ್‌ಗಳಿಗೆ ಹಣ ಹಾಕುವಂತೆ ತಿಳಿಸಲಾಗಿ ಶಿಕ್ಷಕಿ ಹಂತ ಹಂತವಾಗಿ ಒಟ್ಟು 6.52 ಲಕ್ಷ ರೂಪಾಯಿ ಹಣ ಕಳುಹಿಸಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಆತನ ತನ್ನ ಇನ್‌ ಸ್ಟಾಗ್ರಾಮ್‌ ಖಾತೆ ಬ್ಲಾಕ್‌ ಮಾಡಿದ್ದಾನೆ. ಹೀಗಾಗಿ ಶಿಕ್ಷಕಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು ದಕ್ಷಿಣ ಕನ್ನಡದ ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!