ನಮ್ಮ ವಿಜಯಪುರ

ಪ್ರೀತಿಸು ಎಂದು ದುಂಬಾಲು ಬಿದ್ದ, ಮದುವೆಯಾಗೋಣ ಎಂದು ಓಡಿಸಿಕೊಂಡು ಹೋದ, ಅಪ್ರಾಪ್ತೆ ಮೇಲೆ ಅತ್ಯಾಚಾರಗೈದ….ಮುಂದೇನಾಯಿತು?

ಸರಕಾರ್ ನ್ಯೂಸ್ ವಿಜಯಪುರ

ಕೇವಲ 13 ವರ್ಷದ ಬಾಲಕಿ ಶಾಲೆಗೆ ಹೋಗುವಾಗ, ಬರುವಾಗ ಅವಳ ಬೆನ್ನು ಹತ್ತಿ ಪ್ರೀತಿ ಮಾಡು, ಮದುವೆ ಆಗು ಎಂದೆಲ್ಲಾ ಒತ್ತಾಯ ಮಾಡುತ್ತಿದ್ದಲ್ಲದೇ ಆ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಗೈದ ಅಪರಾಧಿಗೆ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ಅಂದ ಹಾಗೆ ಯಾರಪ್ಪಾ ಆ ಅಪರಾಧಿ ಅಂತೀರಾ? ಬಬಲೇಶ್ವರದ ಶ್ರೀಧರ ದಶರಥ ಇಮ್ಮನದ ಶಿಕ್ಷೆಗೆ ಗುರಿಯಾದ ವ್ಯಕ್ತಿ.

ವಿಜಯಪುರದ ಇಟಗಿ ಪೆಟ್ರೋಲ್ ಪಂಪ್ ಹತ್ತಿರದ ಭವಾನಿ ನಿಗರದಲ್ಲಿ ವಾಸವಾಗಿದ್ದ ಸೈಯ್ಯದಲಿ ಹುಸೇನಸಾಬ ಶಿರಗುಂಪಿ ಎಂಬುವರ 13 ವರ್ಷದ ಪ್ರೀತಿಸಿದ್ದನು. ಇದನ್ನು ತಿಳಿದ ಸೈಯ್ಯದಲಿ ಮಗಳನ್ನು ಮದರಸಾದಲ್ಲಿಟ್ಟು ಓದಿಸಲು ಆರಂಭಿಸಿದನು. ಇದನ್ನು ತಿಳಿದ ಶ್ರೀಧರ ಮದರಸಾದಲ್ಲಿದ್ದರೆ ತಾವಿಬ್ಬರೂ ಪರಸ್ಪರ ಮಾತನಾಡಲು ಆಗಲ್ಲ, ಎಲ್ಲಿಯಾದರೂ ಓಡಿಹೋಗಿ ಮದುವೆಯಾಗೋಣ ಎಂದು ಫುಸಲಾಯಿಸಿದ್ದಾನೆ.

ಒಂದು ದಿನ ಅಂಗಡಿಗೆ ಸಾಮಾನು ತರಲು ಹೋಗಿದ್ದ ಬಾಲಕಿಯನ್ನು ಶ್ರೀಧರ ಕರೆದುಕೊಂಡು ಹೋಗಿ ಅಥಣಿಯಲ್ಲಿರುವ ತನ್ನ ಸಂಬಂಧಿಕರ ಖಾಲಿ ಮನೆಯಲ್ಲಿಟ್ಟಿದ್ದನು. ಅಕ್ರಮವಾಗಿ ಇರಿಸಿದ್ದಲ್ಲದೇ ಲೈಂಗಿಕ ಸಂಬಂಧವೂ ಬೆಳೆಸಿದ್ದನು. ಈ ಬಗ್ಗೆ ಗಾಂಧಿಚೌಕ್ ಠಾಣೆಯಲ್ಲಿ ದಾಖಲಾಗಿತ್ತು.

ಇದೀಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ ನಾಯಕ ಅವರು ಸಾಕ್ಷಾಧಾರಗಳು ರುಜುವಾತಾದ ಹಿನ್ನೆಲೆ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 28 ಸಾವಿರ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಹಗರಗುಂಡ ವಾದ ಮಂಡಿಸಿದ್ದರು.

error: Content is protected !!