ಜಿಲ್ಲೆಬಾಗಲಕೋಟ

ಆಲಮಟ್ಟಿ ಬಲದಂಡೆ ಕಾಲುವೆ ಆಧುನೀಕರಣ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ…..

ಬಾಗಲಕೋಟೆ: ಆಲಮಟ್ಟಿ ಬಲದಂಡೆ ಕಾಲುವೆ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಲುವೆ ಆಧುನೀಕರಣಗೊಳಿಸಬೇಕೇಂಬ ಕೂಗು ಕೇಳಿ ಬರತೊಡಗಿದೆ.

ಈ ಬಗ್ಗೆ ಹುನಗುಂದ ಶಾಸಕ ದೊಡ್ಡನಗೌಡ ಜಿ. ಪಾಟೀಲ ಸದನದಲ್ಲಿ ಪ್ರಶ್ನೆ ಮಾಡಿದ್ದು, ಶೀಘ್ರದಲ್ಲೇ ಕಾಲುವೆ ಆಧುನೀಕರಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತವಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-2 ರಡಿ ಆಲಮಟ್ಟಿ ಬಲದಂಡೆ ಕಾಲುವೆ ಒಂದು ಉಪ ಯೋಜನೆಯಾಗಿದೆ. ಈ ಯೋಜನೆಯಡಿ ಮುಖ್ಯ ಕಾಲುವೆ 67.50 ಕಿಮೀ ಉದ್ದ  ಹಾಗೂ ವಿತರಣಾ ಕಾಲುವೆ ನಂ.1ರಿಂದ 24 ನಿರ್ಮಾಣ ಮಾಡಲಾಗಿದೆ.

ಸದರಿ ಕಾಲುವೆ ಜಾಲದ ಕಿಮೀ 0.00 ದಿಂದ 58.00ರವರೆಗಿನ ಮುಖ್ಯ ಕಾಲುವೆ ಹಾಗೂ ವಿತರಣಾಕಾಲುವೆ ಸಂ.1ರೀಂದ 21ರ ವರೆಗಿನ ಕಾಲುಎ ಜಾಲದ ಕೊನೆ ಅಂಚಿನವರೆಗಎ ಯಾವುದೇ ಅಡೆತಡೆ ಇಲ್ಲದೇ ನೀರು ಪೂರೈಸುತ್ತಿರುವುದಾಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಮುಂದುವರಿದು ಕಿಮೀ 59.00 ದೊ<ದ 67.00ರವರೆಗಿನ ಕೆಲವು ತಾಂತ್ರಿಕ ಸಮಸ್ಯೆಯಿಂದ ನೀರು ಪೂರೈಕೆಯಾಗಿಲ್ಲ. ಸದರಿ ಕಾಲುವೆ ರಿಚ್‌ನಲ್ಲಿ ವಾರಬಂದಿ ಪದ್ಧತಿ ಅಳವಡಿಸಿ ಕಾಲುವೆ ಕೊನೆಯ ಅಂಚಿನವರೆಗೆ ಸಮರ್ಪಕವಾಗಿ ನೀರು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಕಾಲುವೆ ಆಧುನಿಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಗ್ರಾಮ ಸಿಂಚಾಯಿ ಹಾಗೂ ಎಐಬಿಪಿ ಕೇಂದ್ರ ಸರ್ಕಾರದ ಅಧೀನದಲ್ಲಿ ಕೈಗೆತ್ತಿಕೊಳ್ಳುವ ಕೂರಿತು ಕೇಂದ್ರ ಜಲ ಆಯೋಗ, ಬೆಂಗಳೂರಿನ ತಂಡ ಆಗಸ್ಟ್‌ 2021ರಲ್ಲಿ ಕಾಲುವೆ ಜಾಲವನ್ನು ಪರಿಶೀಲನೆ ಮಾಡಿದೆ.

ಪ್ರಸ್ತುತ ಕಾಲುವೆ ಆಧುನೀಕರಣ ಕಾಮಗಾರಿಯ 270.40 ಕೋಟಿ ರೂ.ಅಂದಾಜು ಮೊತ್ತ ಒಳಗೊಂಡ ಪ್ರಿ ಫೆಸಿಬಿಲಿಟಿ ರಿಪೋರ್ಟ್‌ ಆಫ್‌ ಇಆರ್‌ ಎಂ ಆಫ್‌ ಯುಕೆಪಿ ಸ್ಟೇಜ್‌-1 ಮತ್ತು 3ರ ಪ್ರಸ್ತಾವನೆಯಲ್ಲಿ ಪ್ರಾಜೆಕ್ಟ್‌ ಅಪ್ರೈಸಲ್‌ ಆರ್ಗನೈಸೇಶನ್‌ ಸಿಡಬ್ಲುಸಿ ನವದೆಹಲಿಗೆ ಸಲ್ಲಿಸಲಾಗಿದ್ದು ಪರಿಶೀಲನೆ ಹಂತದಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

 

error: Content is protected !!