ಹಿರೇಮಸಳಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಭೂಮಿ ಪೂಜೆ…!
ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಳಿ ಕೆಡಿ ಗ್ರಾಮದಲ್ಲಿ ಸೋಮವಾರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಕಾಮಗಾರಿಗೆ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೈಹಿಬೂಬಪಟೇಲ್ ಬಗಲಿ ಮಾತನಾಡಿ, ಬಿಜೆಪಿ ಸರ್ಕಾರ ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸವ ದೃಷ್ಟಿಯಿಂದ ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದೆ. ಶುದ್ಧಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಇನ್ಮುಂದೆ ಯಾರೂ ನೀರೀಗಾಗಿ ಪರಿತಪಿಸಬೇಕಾಗಿಲ್ಲ. ಎಲ್ಲರ ಮನೆಗೂ ನೀರು ಬರಲಿದೆ ಎಂದರು.
ಒಟ್ಟು 21 ಲಕ್ಷ 500ರೂಪಾಯಿ ವೆಚ್ಛದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 25000 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟಾಕಿಯಿಂದ 118ಮನೆ ಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ ಎಂದರು.
ಮುಖಂಡ ಮನೋಜಗೌಡ ಪಾಟೀಲ ಮಾತನಾಡಿ, ಶುದ್ಧ ಕುಡಿಯುವ ನೀರು ಎಲ್ಲರ ಹಕ್ಕು. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಸದುಪಯೋಗವಾಗಲಿ. ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ಆಶಿಸಿದರು.
ಮುಖಂಡರಾದ ಎಂ.ಡಿ. ಭೈರಾಮಡಗಿ, ಶಿವಾಜಿ ಮೆಟಗಾರ, ಮಹ್ಮದ್‌ಅಲಿ ಗೂಗಿಹಾಳ, ಶಶಿ ದೊಡ್ಡಮನಿ, ರಿಯಾಜ್ ಗೌರ, ನಿಂಗಪ್ಪ ಡೊಂಗ್ರೋಜಿ ಮತ್ತಿತರರಿದ್ದರು.