ವಿಜಯಪುರ

ಸಿದ್ದರಾಮಯ್ಯ ವಿರುದ್ದ ಯಡ್ಡಿಯೂರಪ್ಪ ಕಿಡಿ ಕಾರಿದ್ದೇಕೆ? ವಿಜಯೇಂದ್ರ ಸಿಎಂ ಆಗ್ತಾರಾ?

ಸರಕಾರ್ ನ್ಯೂಸ್ ವಿಜಯಪುರ

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಸ್ಥಾನ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಭ್ರಮೆಯಲ್ಲಿ ದ್ದಾರೆ. ಆತ್ಮಸಾಕ್ಷಿಗೂ ಇದಕ್ಕೆ ಸಂಬಂಧ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ‌.ಎಸ್. ಯಡಿಯೂರಪ್ಪ ವಿಜಯಪುರದಲ್ಲಿ ಕಿಡಿ ಕಾರಿದ್ದಾರೆ.

ರಾಜಕೀಯ ನಾಟಕ ಮಾಡ್ತಾ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ.
ನಮ್ಮ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಗೆಲುತ್ತಾರೆ. 3 ಸೀಟ್ ನಮ್ಮವು ಬರ್ತಾವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮುಂದಿನ ಸಿಎಂ ವಿಜಯೇಂದ್ರ ಘೋಷಣೆ ವಿಚಾರಕ್ಕೆ ಮಾತನಾಡಿ ವಿಜಯೇಂದ್ರಗೆ ಒಳ್ಳೆಯ ಭವಿಷ್ಯ ಇದೆ. ನಾವು ಆ ತರಹ ಮಾತಾಡಿಲ್ಲ. ಸ್ನೇಹಿತರು, ಆತ್ಮೀಯರು ಹೇಳಿದ್ದಾರೆ. ವಿಜಯೇಂದ್ರ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

error: Content is protected !!