ವಿಜಯಪುರ

ತಡವಲಗಾದಲ್ಲಿ ಮಕ್ಕಳ ಅಸ್ವಸ್ಥ ಪ್ರಕರಣ, ಜಿಪಂ ಮಾಜಿ ಅಧ್ಯಕ್ಷ ದೌಡು, ಶಿವಯೋಗಪ್ಪ ನೇದಲಗಿ ಕಳಕಳಿ ಹೇಗಿತ್ತು ಗೊತ್ತಾ?

ಸರಕಾರ್ ನ್ಯೂಸ್ ವಿಜಯಪುರ

ತಡವಲಗಾದ ಕಸ್ತೂರಬಾ ವಸತಿ ನಿಲಯದಲ್ಲಿ ವಿಷಯುಕ್ತ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಮಾಜಿ ಅಧ್ಯಕ್ಷ ಶಿವಯೋಗಪ್ಪ‌ ನೇದಲಗಿ ಸ್ಥಳಕ್ಕೆ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು.

ಮಂಗಳವಾರ 19 ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದರು. ವಾಂತಿ, ಭೇದಿ, ಜ್ವರದಿಂದ ಬಳಲುತ್ತಿದ್ದ ಮಕ್ಕಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಸ್ಥಳಕ್ಕೆ ಡಿಡಿಪಿಐ ವಸಂತ ರಾಠೋಡ ಸಹ ಭೇಟಿ‌ ನೀಡಿದ್ದರು. ಪ್ರಕರಣದ ತನಿಖೆಗೆ ಜಿಪಂ ಸಿಇಒ ರಾಹುಲ್ ಶಿಂಧೆ ತಂಡ ರಚಿಸಿದ್ದರು.

ಇದೀಗ ಜಿಪಂ ಮಾಜಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ನೇದಲಗಿ ಅವರ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ಯವಾಯಿತು.

error: Content is protected !!