ತಡವಲಗಾ ಮಕ್ಕಳ ಅಸ್ವಸ್ಥ ಪ್ರಕರಣ, ಬಿಜೆಪಿ ನಾಯಕನ ಭೇಟಿಗೆ ಮೆಚ್ಚುಗೆ, ದಯಾಸಾಗರ ಪಾಟೀಲ ಕಳಕಳಿಗೆ ಮಕ್ಕಳು ಹೇಳಿದ್ದೇನು?
ಸರಕಾರ್ ನ್ಯೂಸ್ ಇಂಡಿ
ಇಲ್ಲಿನ ತಡವಲಗಾದ ಕಸ್ತೂರ ಬಾ ವಸತಿ ನಿಲಯದ ಮಕ್ಕಳಿ ಅಸ್ವಸ್ಥಗೊಂಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಕಳಕಳಿಗೆ ಮಕ್ಕಳು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿದ ದಯಾಸಾಗರ ಪಾಟೀಲ ಹಾಗೂ ಅವರ ಬೆಂಬಲಿಗರು ಮಕ್ಕಳ ಆರೋಗ್ಯ ವಿಚಾರಿಸಿದರು. ವೈದ್ಯರನ್ನು ಮಾತನಾಡಿಸಿ ಮಕ್ಕಳ ಸ್ಥಿತಿಗತಿ ವಿಚಾರಿಸುವ, ಪಾಲಕರಿಗೆ ಧೈರ್ಯ ತುಂಬುವ ದಯಾಸಗಾರ ಅವರ ಕಳಕಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
ಅಸ್ವಸ್ಥಗೊಂಡ ಮಕ್ಕಳು ಆದಷ್ಟು ಬೇಗ ಗುಣಮುಖರಾಗಲಿ, ಅದಕ್ಕೆ ಬೇಕಾದ ಸೌಲಭ್ಯ ಒದಗಿಸಲು ಆಸ್ಪತ್ರೆ ಸಿಬ್ಬಂದಿಗೆ ದಯಾಸಾಗರ ತಿಳಿಸಿದರು. ದಯಾಸಾಗರ ಅವರ ಕಳಕಳಿಗೆ ಮಕ್ಕಳು ಭಾವುಕರಾದರು. ಮಕ್ಕಳನ್ನು ಸಂತೈಸಿದ ಬಳಿಕ ದಯಾಸಾಗರ ಪಾಟೀಲ ಸಾರ್ವಜನಿಕ ಸೇವೆಗೆ ತೆರಳಿದರು.