ಗುಮ್ಮಟ ನಗರಿಯಲ್ಲಿ ಹೆಚ್ಚಿದ ಹೆಮ್ಮಾರಿ, ಕರೊನಾಗೆ ಒಬ್ಬ ಬಲಿ, ಮತ್ತೆ ಬಂದೆಯಾ ಪಿಶಾಚಿ….!
ವಿಜಯಪುರ: ಕಳೆದ ಹಲವು ದಿನಗಳಿಂದ ಕಣ್ಮರೆಯಾಗಿದ್ದ ಹೆಮ್ಮಾರಿ ಕರೊನಾ ಮತ್ತೆ ಗುಮಟ್ಟನಗರಿಗೆ ಒಕ್ಕರಿಸಿಕೊಂಡಿದೆ.
ಏಪ್ರಿಲ್ 1 ರಿಂದ ಮೇ 3 ರವರೆಗೆ 14 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಬಲಿಯಾಗಿದ್ದಾನೆ. ಇದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಒಟ್ಟು 14 ಪ್ರಕರಣಗಳ ಪೈಕಿ ಓರ್ವ ಏಪ್ರಿಲ್ ಅಂತ್ಯಕ್ಕೆ ಅಸುನೀಗಿದ್ದಾನೆ. ಇನ್ನೂ 10 ಪ್ರಕ್ರಣಗಳು ಸಕ್ರಿಯವಾಗಿವೆ ಎಂದರು.
ಅಲ್ಲದೇ ಕರೊನಾ ನಿರ್ವಹಣೆಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು.